ಕುತ್ತಾರು : ಹದಗೆಟ್ಟ ರಸ್ತೆ - ಸಾರ್ವಜಿನಿಕರಿಂದ ಪ್ರತಿಭಟನೆ
ಉಳ್ಳಾಲ, ಫೆ, 14: ಕುತ್ತಾರು ಮದಕ, ಮದನಿ ನಗರ, ಅಗೆಲ, ಕಂಪ, ಬೊಳ್ಯ ಸಂಪರ್ಕಿಸುವ ರಸ್ತೆ 23ವರ್ಷಗಳಿಂದ ಮೊದಲು ಡಾಮರಿಕಾರಂಗೊಂಡಿದ್ದು ಈಗ ಸಂಪೂರ್ಣ ಹದಗಟ್ಟಿದ್ದು ಸಂಚಾರಕ್ಕೆ ಕಷ್ಟವಾಗುತ್ತಿದ್ದು ಸಾರ್ವಜಿನಿಕರು ಸ್ಥಳೀಯ ಪ್ರತಿನಿಧಿಗಳೊಂದಿಗೆ ಮನವಿ ಸಲ್ಲಿಸಿದರು ಯಾವುದೆ ಸ್ಪಂದನೆ ಸಿಗದ ಕಾರಣ ರವಿವಾರ ಪ್ರತಿಭಟನೆ ನಡೆಸಿದರು.
ಚುನಾವಣೆ ಸಂದರ್ಭದಲ್ಲಿ ಬೇರೆ ಬೇರ ಪಕ್ಷದರು ರವಸೆ ನೀಡುದಲ್ಲದೆ ಯಾವುದೆ ಅಭಿವೃದ್ಧಿಕಾರ್ಯಗಳು ನಡೆಸುದ್ದಿಲ್ಲ. ಮೂಲಭೂತ ಸೌರ್ಕಯ ಇಲ್ಲದೆ ಈ ಪ್ರದೇಶದ ನಾಗರಿಕರು ಪರದಾಡುತ್ತಿದ್ದಾರೆ. 500ಕ್ಕೂ ಹೆಚ್ಚು ಮನೆಗಳಿದ್ದು ಎಲ್ಲರು ಈ ಭಾರಿಯ ತಾ.ಪ ಮತ್ತು ಜಿ.ಪ ಚುನಾವಣೆಯನ್ನು ಬಹಿಷ್ಕಾರಿಸುದು ತಿರ್ಮಾನಿಸಿದೆವೆ ಎಂದು ನಾಗರಿಕರು ತಿಳಿಸಿದರು.
ಸ್ಥಳೀಯರಾದ ಗಂಗಯ್ಯ, ಶಮೀರ್, ಮುನ್ವರ್, ಪಾರೂಕ್, ಶಂಸುದ್ದೀನ್, ಎಸ್.ಎ. ರಿಝ್ವನ್, ರಿಯಾರ್, ನಾಗರಾಜ್ ಬೊಲ್ಯ ಮುಂತಾದವರು ಪ್ರತಿಭಟಣೆಯಲ್ಲಿ ಭಾಗವಹಿಸಿದ್ದರು.
ಮಾಜಿ. ಜಿ.ಪ ಉಪಾಧ್ಯಕ್ಷ ಸತೀಶ್ ಕುಂಪಲ ಬೇಟಿ
ಮಾಜಿ. ಜಿ.ಪ ಉಪಾಧ್ಯಕ್ಷ ಸತೀಶ್ ಕುಂಪಲ ಪ್ರತಿಭಟನ ಸ್ಥಳಕ್ಕೆ ಬೇಟಿ ನೀಡಿ ಚುನಾವಣೆ ನಂತರ ಈ ವಿಷಯದ ಕುರಿತು ಸಭೆ ಕರೆದು ಚರ್ಚಿಸಿ ರಸ್ತೆಯ ಕಾಮಗಾರಿ ಪ್ರಾರಂಭಿಸಲಾಗುವುದು. ನಿವು ಬಿಜೆಪಿ ಪಕ್ಷಕ್ಕೆ ಮತ ಹಾಕಿ ನಮ್ಮನು ಪ್ರಥಮವಾಗಿ ಬೆಂಬಲಿಸಿ ಎಂದರು.