ಸಂಗೀತ ಶಿಕ್ಷಕಿ ಬೈಕ್ ಅಪಘಾತದಲ್ಲಿ ಮೃತ್ಯು
ಬಂಟ್ವಾಳ, ಫೆ. 14: ತಾಲೂಕಿನ ಭಂಡಾರಿಬೆಟ್ಟು ನಿವಾಸಿ, ಪ್ರತಿ ಭಾನ್ವಿತ ಸಂಗೀತ ಶಿಕ್ಷಕಿ ಯೊಬ್ಬರು ಗುರು ಪುರ ಕೈಕಂಬದ ಕಿನ್ನಿಕಂಬ್ಳ ಎಂಬಲ್ಲಿ ಪತಿಯ ಬೈಕಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕೆಳಗೆ ಬಿದ್ದು ಗಂಭೀರ ಗಾಯಗೊಂಡು ಸಾವನ್ನಪ್ಪಿದ ಘಟನೆ ರವಿವಾರ ನಡೆದಿದೆ.
ಇಲ್ಲಿನ ಭಂಡಾರಿ ಬೆಟ್ಟು ಮರದ ಕೆತ್ತನೆ ಶಿಲ್ಪಿ ಪುರಂದರ ಆಚಾರ್ಯರ ಪತ್ನಿ ಹೇಮಾವತಿ ಆಚಾರ್ಯ (44) ಮೃತ ಶಿಕ್ಷಕಿ. ಇತ್ತೀಚೆಗೆ ಇವರ ಸಂಬಂಧಿಕರೊಬ್ಬರು ಬೈಕ್ ಅಪಘಾತದಿಂದ ಸಾ ವನ್ನಪ್ಪಿದ್ದು, ಅವರ ಉತ್ತರಕ್ರಿಯೆಗೆ ಪುರಂ ದರ ಆಚಾರ್ಯ ಆಕ್ಟಿವಾ ಸ್ಕೂಟರ್‌ನಲ್ಲಿ ಪತ್ನಿಯೊಂದಿಗೆ ಹೋಗು ತ್ತಿದ್ದ ವೇಳೆ ರಸ್ತೆಗೆ ಉರುಳಿ ಬಿದ್ದಿದ್ದಾರೆ ಎನ್ನಲಾಗಿದೆ. ತಲೆಗೆ ಗಂಭೀರ ಗಾಯ ಗೊಂಡ ಅವರನ್ನು ತಕ್ಷಣವೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಷ್ಟರಲ್ಲಿ ಅವರು ಮೃತಪಟ್ಟಿದ್ದರು.
ಘಟನೆಯಿಂದ ಪುರಂದರ ಆಚಾ ರ್ಯರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತರು ಬಂಟ್ವಾಳ ಮತ್ತು ಬಿ.ಸಿ. ರೋಡ್‌ನಲ್ಲಿ ಹಲವಾರು ಮಕ್ಕಳಿಗೆ ಸಂಗೀತ ತರಬೇತಿ ನೀಡುತ್ತಿದ್ದು, ಜಕ್ರಿಬೆಟ್ಟು ಸಾರ್ವಜನಿಕ ಗಣೇಶೋತ್ಸವ ಮತ್ತಿತರ ಸಮಾರಂಭಗಳಲ್ಲಿ ಭಜನೆ ಮತ್ತಿತರ ಕಾರ್ಯಕ್ರಮ ನೀಡುವ ಮೂಲಕ ಜನಪ್ರಿಯರಾಗಿದ್ದರು. ಇಲ್ಲಿನ ವಿಶ್ವಜ್ಯೋತಿ ಮಹಿಳಾ ಮಂಡಳಿ ಮಾಜಿ ಅಧ್ಯಕ್ಷೆಯಾಗಿದ್ದ ಇವರು ಕ್ರಿಯಾಶೀಲ ಚಟುವಟಿಕೆ ಮೂಲಕ ಗಮನ ಸೆ ಳೆದಿದ್ದರು. ಮೃತರು ಪತಿ ಸಹಿತ ಇಬ್ಬರು ಪುತ್ರರು ಮತ್ತು ಪುತ್ರಿಯರನ್ನು ಅಗಲಿದ್ದಾರೆ.