ದಕ್ಷಿಣ ಕೊರಿಯಾದ ಮಿಲಿಟರಿ ಹೆಲಿಕ್ಯಾಪ್ಟರ್ ಪತನ; 3 ಯೋಧರು ಬಲಿ
Update: 2016-02-15 14:12 IST
ಸಿಯೋಲ್, ಫೆ.15: ದಕ್ಷಿಣ ಕೊರಿಯಾದ ಸೇನಾ ಹೆಲಿಕ್ಯಾಪ್ಟರ್ ಇಂದು ಬೆಳಗ್ಗೆ ನಗರದ ಚುನ್‌ಚೆಯೊನ್‌ನಲ್ಲಿ ಪತನಗೊಂಡು ಮೂವರು ಯೋಧರು ಮೃತಪಟ್ಟಿದ್ದಾರೆ.
ಹೆಲಿಕ್ಯಾಪ್ಟರ್ ಪರೀಕ್ಷಾರ್ಥ ಹಾರಾಟ ಸಂದರ್ಭದಲ್ಲಿ ಚುನ್‌ಚೆಯೊನ್‌ನ ಹೊಲಕ್ಕೆ ಉರುಳಿ ಬಿದ್ದಿದೆ. ಹೆಲಿಕ್ಯಾಪ್ಟರ್ ಪತನಗೊಂಡ ಪರಿಣಾಮವಾಗಿ ಗಾಯಗೊಂಡಿದ್ದ ನಾಲ್ವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಗಾಯಾಳು ಯೋಧರ ಪೈಕಿ ನಾಲ್ವರು ಮೃತಪಟ್ಟಿರುವುದಾಗಿ ಮೂಲಗಳು ತಿಳಿಸಿವೆ. ಅಪಘಾತಕ್ಕೆ ಕಾರಣ ತಿಳಿದು ಬಂದಿಲ್ಲ.