×
Ad

ಕಾರ್ನಾಡು ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಸೀಮಿತ ಒವರ್‌ಗಳ ಕ್ರಿಕೆಟ್ ಪಂದ್ಯಾ ಕೂಟ

Update: 2016-02-15 15:25 IST

ಮುಲ್ಕಿ, ಫೆ.15: ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಶ್ರೀ ನಾರಾಯಣ ಗುರು ಸೇವಾದಳದ ಆಶ್ರಯದಲ್ಲಿ ಸಮಾಜ ಭಾಂಧವರಿಗೆ ಕಾರ್ನಾಡು ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಸೀಮಿತ ಒವರ್‌ಗಳ ಕ್ರಿಕೆಟ್ ಪಂದ್ಯಾ ಕೂಟ ಭಾನುವಾರ ನಡೆಯಿತು.
 

ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ವಾಜಿ ಅಧ್ಯಕ್ಷ ಉಮಾನಾಥ ಕೋಟ್ಯಾನ್, ಯುವ ಸಮಾಜ ಕ್ರೀಡೆಯಲ್ಲಿ ಸಂಘಟಿತರಾದಂತೆ ಸಮಾಜದ ಅಭಿವೃದ್ಧಿಯಲ್ಲಿ ಸಹಾಯ ನೀಡಬೇಕು. ಶಿಕ್ಷಣ ಹಾಗೂ ಸಂಘಟನೆಗಾಗಿ ಹೆಚ್ಚಿನ ಮಹತ್ವ ನೀಡಬೇಕು ಎಂದರು.


ಸಮಾರಂಭದ ಅಧ್ಯಕ್ಷತೆಯನ್ನು ಸೇವಾದಳದ ದಳಪತಿ ಸತೀಶ್ ಅಂಚನ್ ವಹಿಸಿದ್ದರು. ಅತಿಥಗಳಾಗಿ ಸಂಘದ ಪೂರ್ವಾಧ್ಯಕ್ಷ ಯದೀಶ್ ಅಮೀನ್ ಕೊಕ್ಕರಕಲ್, ಗೌ.ಪ್ರಧಾನ ಕಾರ್ಯದರ್ಶಿ ರಮೇಶ್ ಅಮೀನ್ ಕೊಕ್ಕರಕಲ್, ಉದ್ಯಮಿ ರಾಜೇಶ್ ಬಿ.ಅಮೀನ್, ತಾರಾನಾಥ ಕೊಕ್ಕರಕಲ್ ಅತಿಥಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News