ಉತ್ತರ್‌ಖಂಡ್:ಹೊಟ್ಟೆಯ ಹುಳ ನಿಗ್ರಹ ಔಷಧ ದುರಂತ ಓರ್ವಬಾಲಕಿ ಸಾವು
ಡೆಹ್ರಾಡೂನ್: ನಾಲ್ಕು ದಿವಸಗಳ ಹಿಂದೆ ರಾಷ್ಟ್ರೀಯ ಅಭಿಯಾನದ ಪ್ರಯುಕ್ತ ಉತ್ತರ ಖಂಡದ ಶಾಲೆಯಲ್ಲಿ ಹೊಟ್ಟೆಯ ಹುಳದ ಔಷಧ ಸೇವಿಸಿದ್ದ ವಿದ್ಯಾರ್ಥಿನಿಯೊಬ್ಬಳು ಮೃತಳಾಗಿದ್ದಾಳೆ. ಇನ್ನು ಹದಿನೈದು ಮಕ್ಕಳ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಸೋಮವಾರ ಬೆಳಗ್ಗೆ ಈ ದಯಾನೀಯ ಸಾವು ಸಂಭವಿಸಿದೆ. ಅದೇ ವೇಳೆ ಗಂಭೀರ ಸ್ಥಿತಿಯಲ್ಲಿರುವ ಸುಮಾರು ಹದಿನಾಲ್ಕು ವಿದ್ಯಾರ್ಥಿ_ ವಿದ್ಯಾರ್ಥಿನಿಯರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಆಸ್ಪತ್ರೆಯ ವೈದ್ಯರು ವಿದ್ಯಾರ್ಥಿನಿ ಸಾವಿಗೆ ಮೆದುಳು ಜ್ವರ ಕಾಣವೆಂದು ಹೇಳಿದ್ದಾರೆ.
ಉತ್ತರಖಂಡ್ ಆರೋಗ್ಯ ಇಲಾಖೆಯು ರಾಷ್ಟ್ರೀಯ ಅಭಿಯಾನದ ಪ್ರಯುಕ್ತ ಫೆ.10ರಂದು ಕ್ರಿಮಿ ನಿವಾರಕ್ ದಿವಸವನ್ನು ಆಚರಿಸಿತ್ತು. ಅಂದು ರಾಜ್ಯದ ಶಾಲೆಗಳಲ್ಲಿ ಹೊಟ್ಟೆಯ ಹುಳ ನಿಯಂತ್ರಣ ಔಷಧ ವಿತರಿಸಲಾಗಿತ್ತು. ಮದ್ದು ಸೇವಿಸಿದ ಬಳಿಕ ಐವತ್ತಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದರು. ಇವರಲ್ಲಿ ಹದಿನೈದು ಮಕ್ಕಳ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಮೃತಬಾಲಕಿಯನ್ನು ಲಾಲ್‌ಪುರ ಗ್ರಾಮದ ಎಂಟು ವರ್ಷದ ಸಲೋನಿ ಎಂದು ಗರುತಿಸಲಾಗಿದೆ.
ಮಕ್ಕಳಿಗೆ ಹೊಟ್ಟೆಯ ಹುಳ ಸಾಯಿಸಲು ಐದು ಮಾತ್ರೆಗಳನ್ನು ನೀಡಲಾಗಿತ್ತು. ಆದರೂ ವೈದ್ಯರು ತೀವ್ರಜ್ವರ ಸಾವಿಗೆ ಕಾರಣವೆಂದು ಹೇಳುತ್ತಿದ್ದಾರೆ. ಪೊಲೀಸರು ಬಾಲಕಿ ಮೃತಶರೀರವನ್ನು ಪೊಸ್ಟ್‌ಮಾರ್ಟಮ್‌ಗೆ ಕಳುಹಿಸಿದ್ದಾರೆ.