×
Ad

ಕಾಸರಗೋಡು : ಬಿ ಜೆಪಿ ಮತ್ತು - ಸಿ ಪಿ ಎಂ ಕಾರ್ಯಕರ್ತರೊಳಗೆ ನಡೆದ ಘರ್ಷಣೆ-ನಾಲ್ವರಿಗೆ ಇರಿತ, 11 ಮಂದಿಗೆ ಗಾಯ

Update: 2016-02-15 16:58 IST

ಕಾಸರಗೋಡು :  ಬಿ ಜೆಪಿ ಮತ್ತು - ಸಿ ಪಿ ಎಂ ಕಾರ್ಯಕರ್ತರೊಳಗೆ ನಡೆದ  ಘರ್ಷಣೆಯಲ್ಲಿ  ನಾಲ್ವರು ಇರಿತಕ್ಕೊಳಗಾಗಿದ್ದು,  ಒಟ್ಟು ೧೧ ಮಂದಿ ಗಾಯಗೊಂಡ ಘಟನೆ ಅಜನೂರಿನಲ್ಲಿ ಆದಿತ್ಯವಾರ  ರಾತ್ರಿ ನಡೆದಿದೆ.

ಹಿಂಸಾಚಾರದಿಂದ  ಒಂಭತ್ತು ಮನೆಗಳಿಗೆ  ಹಾನಿಗೊಳಿಸ ಲಾಗಿದ್ದು , ಎರಡು ವಾಹನಗಳಿಗೆ ಬೆಂಕಿ  ಹಚ್ಚಲಾಗಿದೆ. 

ರಾತ್ರಿ ಸಿಪಿಎಂ ಕಾರ್ಯಕರ್ತರ ಮೇಲೆ ಬಿ ಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿದ್ದು , ಬಳಿಕ  ಹಿಂಸಾಚಾರ ಸ್ಪೋಟಗೊಂಡಿದೆ . ಗಾಯಗೊಂಡವರಲ್ಲಿ  ಸಿ ಪಿ ಎಂ ಕಾರ್ಯಕರ್ತರಾದ  ಬಿಜೇಶ್ , ಕೃಪೇಶ್ , ಮಿಥುನ್ , ಶೈಜು  ಒಳಗೊಂಡಿದ್ದಾರೆ. 

ದೇವಸ್ಥಾನಕ್ಕೆ ತೆರಳಿ  ಮರಳು ತ್ತಿದ್ದ   ಸಂದರ್ಭದಲ್ಲಿ ಘಟನೆ ನಡೆದಿದೆ . ಬಿಜೇಶ್ ನನ್ನು ಪರಿಯಾರಂ ಮತ್ತು ಉಳಿದಿಬ್ಬರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದಕ್ಕೆ ಪ್ರತಿಕಾರವಾಗಿ ಬಿ ಜೆ ಪಿ ಕಾರ್ಯಕರ್ತರ ಮೇಲೆ  ಹಲ್ಲೆ ನಡೆಸಲಾಗಿದೆ. ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದಾಗ   ಘಟನೆ ನಡೆದಿದೆ. ಬಿ ಜೆ ಪಿ ಕಾರ್ಯಕರ್ತರಾದ  ಪೊಯ್ಯಕ್ಕರೆಯ  ಶ್ರೀಧರನ್ , ಸುಕುಮಾರನ್  ರವರದ್ದು ಸೇರಿದಂತೆ  9 ಮನೆ ಗಳಿಗೆ  ಹಾನಿಗೊಳಿಸಲಾಗಿದೆ.

ಸಿಪಿಎಂ ಕಾರ್ಯಕರ್ತ  ಅಜೀಶ್ ರವರ  ಅಟೋ ಮತ್ತು ರವಿಯವರ  ಬೈಕ್ ಗೆ ಬೆಂಕಿ ಹಚ್ಚಲಾಗಿದೆ.  ಸ್ಥಳೀಯ ಬಿಜೆಪಿ ಕಛೇರಿಯನ್ನು ಧ್ವಂಸಗೊಳಿಸಲಾಗಿದೆ.

ಘಟನೆ ಹಿನ್ನಲೆಯಲ್ಲಿ ಜಿಲ್ಲಾ ಪೊಲೀಸ್ ಮುಖ್ಯಸ್ಥ  ಎ . ಶ್ರೀನಿವಾಸ್  ಮೇಲ್ನೋಟದಲ್ಲಿ ಬಿಗು ಪೊಲೀಸ್  ಬಂದೋಬಸ್ತ್ ಏರ್ಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News