ಸುಳ್ಯ : ಬಯಲು ಸೂರ್ಯ ಆಲಯದಲ್ಲಿ ಯೋಗ ಕಾರ್ಯಾಗಾರ
ಸುಳ್ಯ: ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯ ಬಯಲು ಸೂರ್ಯ ಆಲಯದಲ್ಲಿ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿಯವರು ಒಂದು ದಿನದ ಯೋಗ ಕಾರ್ಯಾಗಾರ ನಡೆಸಿದರು.
ಸೂರ್ಯನ ಜನ್ಮದಿನವಾದುದರಿಂದ ಸೂರ್ಯನಮಸ್ಕಾರದೊಂದಿಗೆ ಆರಂಭವಾದ ಕಾರ್ಯಾಗಾರದಲ್ಲಿ ಯೋಗಮುದ್ರೆಗಳು, ಬಣ್ಣಚಿಕಿತ್ಸೆ ಹಾಗೂ ಚಕ್ರಧ್ಯಾನಗಳನ್ನು ಪ್ರಾಯೋಗಿಕವಾಗಿ ಕಲಿಸಿದರು. ಶಾಲಾ ವಿದ್ಯಾರ್ಥಿಗಳು, ಶಿಕ್ಷಕ ವೃಂದದವರು ಮತ್ತು ಆಸಕ್ತ ಸಾರ್ವಜನಿಕ ಅಭ್ಯಾಸಿಗಳು ಭಾಗವಹಿಸಿದ್ದರು. ಮಂಗಳೂರಿನ ಶ್ಯಾಮ ಪ್ರಸಾದ ಮುದ್ರಜೆ ಹಾಗೂ ದಯಾನಂದ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಸಹಕರಿಸಿದರು.
ಆರಂಭದಲ್ಲಿ ನಿವೃತ್ತ ಶಿಕ್ಷಕ ಪೆದಮಲೆ ರಾಮಭಟ್ಟರು ಕಾರ್ಯಾಗಾರವನ್ನು ಉದ್ಘಾಟಿಸಿದರು. ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಕೊಳಂಬೆ ಚಿದಾನಂದ ಗೌಡರು ಅತಿಥಿಗಳಾಗಿದ್ದರು. ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಚಂದ್ರಶೇಖರ ದಾಮ್ಲೆ ಮಾತನಾಡಿ, ಇನ್ನು ಪ್ರತಿ ತಿಂಗಳ ಎರಡನೇ ಆದಿತ್ಯವಾರದಂದು ಇಂತಹ ಯೋಗ ಕಾರ್ಯಾಗಾರಗಳನ್ನು ನಡೆಸಲಾಗುವುದೆಂದು ಹೇಳಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮಿ ದಾಮ್ಲೆ ವಂದಿಸಿದರು.