ಮಂಗಳೂರು : ಮತಯಂತ್ರ, ಜಿ.ಪಂ-ಗುಲಾಬಿ, ತಾ.ಪಂ.-ಬಿಳಿ ಬಣ್ಣದ ಮತಪತ್ರ
Update: 2016-02-15 17:31 IST
ಮಂಗಳೂರು ಫೆಬ್ರವರಿ 15 ; ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಸಾರ್ವತ್ರಿಕ ಚುನಾವಣೆಗೆ ಸಂಬಂಧಪಟ್ಟಂತೆ ತಾಲೂಕು ಪಂಚಾಯತ್ ಇವಿಯಂ ಮತಯಂತ್ರಗಳಿಗೆ ಬಿಳಿ ಬಣ್ಣದ ಮತಪತ್ರಗಳನ್ನು ಮತ್ತು ಜಿಲ್ಲಾ ಪಂಚಾಯತ್ ಇವಿಯಂ ಮತಯಂತ್ರಗಳಿಗೆ ಗುಲಾಬಿ ಬಣ್ಣದ ಮತಪತ್ರಗಳನ್ನು ಅಳವಡಿಸಲಾಗಿದೆ. ಮತದಾರರು ಮೊದಲು ಜಿಲ್ಲಾ ಪಂಚಾಯತ್ ನಂತರ ತಾಲೂಕು ಪಂಚಾಯತಿಗೆ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಮಂಗಳೂರು ತಹಶೀಲ್ದಾರರ ಪ್ರಕಟಣೆ ತಿಳಿಸಿ