ಮಂಗಳೂರು : ಕರಾವಳಿ ಕಾಲೇಜುಗಳ ಸಮೂಹದಲ್ಲಿ ಅಂತರ್ ಕಾಲೇಜು ಕ್ರೀಡಾಕೂಟ - ಉದ್ಫಾಟನೆ

Update: 2016-02-15 13:19 GMT

ಮಂಗಳೂರು, ಫೆ.15:ಕ್ರೀಡೆಯು ಒಂದು ನಿರಂತರ ಪ್ರಕ್ರಿಯೆ ಹಾಗೂ ಜಾತಿ, ಮತ, ಭಾಷೆ ಹಣ ಅಂತಸ್ತುಗಳನ್ನು ಮೀರಿ ಪಾಲ್ಗೊಳ್ಳುವ ಚಟುವಟಿಕೆಯಾಗಿದ್ದು, ತಾಳ್ಮೆ ಮತ್ತು ಸಹಕಾರಗಳ ಒಂದು ಸಂಗಮ ಎಂದು ಕರಾವಳಿ ಕಾಲೇಜುಗಳ ಸಮೂಹದ ಆಡಳಿತ ಮಂಡಳಿ, ಜಿ.ಆರ್ ಎಜ್ಯುಕೇಶನ್ ಟ್ರಸ್ಟ್(ರಿ)ನ. ಸ್ಥಾಪಕಾಧ್ಯಕ್ಷ ಎಸ್. ಗಣೇಶ್‌ರಾವ್‌ರವರು ಕರಾವಳಿ ಕಾಲೇಜುಗಳ ಸಮೂಹದ ವತಿಯಿಂದ ನಡೆದ ಅಂತರ್‌ಕಾಲೇಜು ಕ್ರೀಡೋತ್ಸವದ ಉದ್ಫಾಟನಾ ಸಮಾರಂಭ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಭಾರತವು ಸಹಿಷ್ಣುತೆಯನ್ನು ಪ್ರೋತ್ಸಾಹಿಸುವ ದೇಶ ಆದರೂ ಕೆಲವೊಂದು ದುಷ್ಟ ಶಕ್ತಿಗಳಿಂದಾಗಿ ದೇಶದ ಒಗ್ಗಟ್ಟನ್ನು ಕಲಕುವಂತಹ ಘಟನೆಗಳು ನಡೆಯುತ್ತದೆ. ಈ ನಿಟ್ಟಿನಲ್ಲಿ ಶಾಲೆ, ಕಾಲೇಜು, ವಿಶ್ವ ದ್ಯಾನಿಲಯಗಳು ಸರಿಯಾದ ಮಾರ್ಗದಲ್ಲಿ ವಿದ್ಯಾರ್ಥಿಗಳು ನಡೆಯುವಂತೆ ಮಾರ್ಗದರ್ಶನವನ್ನು ನೀಡಬೇಕು ಎಂದರು.

ಸಮಾರಂಭದಲ್ಲಿ ಕರಾವಳಿ ಕಾಲೇಜು ಸಮೂಹದ ನಿರ್ದೇಶಕಿ ಲತಾ ಜಿ. ರಾವ್ ಮತ್ತು ಕರಾವಳಿ ಕಾಲೇಜುಗಳ ಪ್ರಾಂಶುಪಾಲರುಗಳಾದ ಡಾ ನಾರಾಯಣ ಸ್ವಾಮಿ, ಡಾ ಲೀನ್‌ಸನ್, ಪ್ರೊ.ಆರ್ ಕೆ ಭಟ್ ಪ್ರೊ. ಆನಂದ್, ಮೋಹನ್ ನಾಯ್ಕೊ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಉಪನ್ಯಾಸಕಿ ಕುಮಾರಿ ದೀಪಿಕಾ ನಿರೂಪಿಸಿ, ವಿದ್ಯಾರ್ಥಿನಿ ಅಥಿರಾ ಸ್ವಾಗತಿಸಿದರು, ವಿದ್ಯಾರ್ಥಿ ಫ್ಲೆವಿನ್ ಅಲೆಕ್ಸ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News