×
Ad

ಸಂವಿಧಾನಕ್ಕೆ ಕಳಂಕವನ್ನು ತಂದಿರುವ ಸಮಾಜಘಾತುಕರನ್ನು ಕೂಡಲೇ ಬಂಧಿಸಬೇಕು - ಮಂಗಳೂರು ಸೆಂಟ್ರಲ್ ಕಮಿಟಿ ಆಗ್ರಹ

Update: 2016-02-15 19:10 IST

  ಮಂಗಳೂರು, ಪೆ.15: ಜವಾಹರಲಾಲ್ ನೆಹರು ವಿಶ್ವದ್ಯಾಲಯದ (ಜೆ. ಎನ್. ಯು.) ವಿದ್ಯಾರ್ಥಿಗಳ ನ್ಯಾಯೋಚಿತವಾದ ಪ್ರತಿಭಟನೆಯಲ್ಲಿ ಕೆಲವೊಂದು ಸಮಾಜಘಾತುಕ ಶಕ್ತಿಗಳ ಕಾರಣದಿಂದ ಭಾರತದ ವಿರೋಧ ಘೋಷಣೆಗಳನ್ನು ಕೂಗಿ ಪ್ರತಿಭಟನೆಗೆ ಹಾಗೂ ಸಂವಿಧಾನಕ್ಕೆ ಕಳಂಕವನ್ನು ತಂದಿರುವ ಸಮಾಜಘಾತುಕರನ್ನು ಕೂಡಲೇ ಬಂಧಿಸಬೇಕಾಗಿ ಮಂಗಳೂರು ಸೆಂಟ್ರಲ್ ಕಮಿಟಿಯು ಆಗ್ರಹಿಸುತ್ತದೆ.

ಜೆ. ಎನ್. ಯು. ಪ್ರತಿಭಟನೆಗೆ ಎಲ್. ಇ. ಟಿ. ಯ ಕುಮ್ಮಕ್ಕು ಇದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್‌ರ ಹೇಳಿಕೆಯು ದುರ್ಬಲ ಹೇಳಿಕೆಯಾಗಿದ್ದು ಈ ಬಗ್ಗೆ ಅವರಲ್ಲಿ ಯಾವುದೇ ಸಾಕ್ಷ್ಯಾಧಾರಗಳಿದ್ದರೂ ಅವುಗಳನ್ನು ಬಹಿರಂಗಗೊಳಿಸಬೇಕೆಂದು ಸಂಘಟನೆಯ ಮುಖಂಡರಾದ ಅಲಿ ಹಸನ್, ಅಬ್ದುಲ್ ಅಜೀಜ್ ಹಾಗೂ ಯಾಸಿನ್ ಕುದ್ರೋಳಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News