ಮುಡಿಪು ವ್ಯಾಪ್ತಿಯಲ್ಲಿ ಸೋಮವಾರ ಸಚಿವ ಯು.ಟಿ.ಖಾದರ್ ಅವರು ಕಾಂಗ್ರೆಸ್ ಮುಖಂಡರೊಂದಿಗೆ ಬಿರುಸಿನ ಮತಪ್ರಚಾರ ನಡೆಸಿದರು.
ಕೊಣಾಜೆ: ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ಸಮೀಪಿಸುತ್ತಿರುವಂತೆಯೇ ಪ್ರಚಾರ ಕಾರ್ಯವೂ ಬಿರುಸಿನಿಂದ ಸಾಗುತ್ತಿದ್ದು ಸೋಮವಾರ ಸಚಿವ ಯು.ಟಿ.ಖಾದರ್ ಅವರು ಕಾಂಗ್ರೆಸ್‌ನ ಇನ್ನಿತರ ಮುಖಂಡರುಗಳೊಂದಿಗೆ ಕುರ್ನಾಡು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಅಭ್ಯರ್ಥಿಗಳ ಪರವಾಗಿ ಮತಯಾಚಿಸಿದರು. ಕುರ್ನಾಡು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಮುಡಿಪು, ಕೈರಂಗಳ, ನರಿಂಗಾನ, ಮೂಳೂರು, ಬಂಗಾರು ಗುಡ್ಡೆ, ತೌಡುಗೊಳಿ, ಮೋಂಟುಗೋಳಿ, ನೆತ್ತಿಲಪದವು ಇನ್ನಿತರ ಕಡೆಗಳಲ್ಲಿ ಮನೆಮನೆ ತೆರಳಿ ಮತಯಾಚನೆಗೈದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಪ್ರಶಾಂತ್ ಕಾಜವ, ಜಿಲ್ಲಾ ಪಂಚಾಯಿತಿ ಅಭ್ಯರ್ಥಿ ಮಮತಾ ಡಿ.ಎಸ್.ಗಟ್ಟಿ, ತಾಲೂಕು ಪಂಚಾಯಿತಿ ಅಭ್ಯರ್ಥಿ ಹೈದರ್ ಕೈರಂಗಳ, ಚುನಾವಣಾ ವೀಕ್ಷಕರಾದ ಅಪ್ಪಿ ಮಂಗಳೂರು, ಕಾಂಗ್ರೆಸ್ ಮುಖಂಡರುಗಳಾದ ಸುದೀರ್ ಟಿ.ಕೆ, ರಮಾನಂದ ಪೂಜಾರಿ, ಸಿದ್ದೀಕ್ ಪಾರೆ, ಇಸ್ಮಾಯಿಲ್ ಮೀನಂಕೋಡಿ, ಚಂದ್ರಹಾಸ್ ಮೋರ್ಲ, ಜಲೀಲ್ ಮೋಂಟುಗೋಳಿ, ಪದ್ಮನಾಭ ನರಿಂಗಾನ, ನಾಸೀರ್ ನಡುಪದವು ಮೊದಲಾದವರು ಉಪಸ್ಥಿತರಿದ್ದರು.