×
Ad

ಚಾರ್ಮಾಡಿ : ಕಳವು ಆರೋಪಿಯ ಹೊಡೆದು ಕೊಲೆ

Update: 2016-02-15 21:16 IST

ಬೆಳ್ತಂಗಡಿ: ಚಾರ್ಮಾಡಿ ಗ್ರಾಮ ಪಂಚಾಯತು ವ್ಯಾಪ್ತಿಯ ತೋಟತ್ತಾಡಿಯಲ್ಲಿ ಹಲವಾರು ಕ್ರಿಮಿನಲ್ ಪ್ರಕರಣಗಳ ಆರೋಪಿಯೋರ್ವನನ್ನು ಸಾರ್ವಜನಿಕರು ಹಲ್ಲೆ ನಡೆಸಿ ಹತ್ಯೆಮಾಡಿದ ಘಟನೆ ಸೋಮವಾರ ಸಂಜೆ ಸಂಭವಿಸಿದೆ.

ಮೃತ ವ್ಯಕ್ತಿ ಸ್ಥಳೀಯ ನಿವಾಸಿ ಪೀಟರ್ ಎಂಬಾತನಾಗಿದ್ದಾನೆ ಈತ ಕಳೆದ ಡಿ 25 ರಂದು ಮನೆಯೊಂದಕ್ಕೆ ನುಗ್ಗಿ ಕಳ್ಳತನ ನಡೆಸಿ ಸಿಕ್ಕಿ ಬಿದ್ದಿದ್ದ. ಜೈಲಿನಿಂದ ಹೊರಬಂದು ಒಂದುವಾರ ಆಗಿತ್ತಷ್ಟೇ ಎರಡು ದಿನಗಳ ಹಿಂದೆ ಈತ ತೋಟತ್ತಾಡಿಯ ಮನೆಯೊಂದರಲ್ಲಿ ಕಳ್ಳತನ ಮಾಡಿದ್ದ. ಬಳಿಕ ತಲೆ ಮರೆಸಿಕೊಂಡಿದ್ದ ಈತ ಇಂದು ಸಂಜೆಯ ವೇಳೆ ಸಾರ್ವಜನಿಕರ ಕೈಗೆ ಸಿಕ್ಕಿದ್ದಾನೆ ಭಾರೀ ಸಂಖ್ಯೆಯಲ್ಲಿ ಸೇರಿದ್ದ ಸಾರ್ವಜನಿಕರು ಈತನ ಮೇಲೆ ತೀವ್ರ ಹಲ್ಲೆ ನಡೆಸಿದ್ದು ಪೋಲೀಸರು ಸ್ಥಳಕ್ಕೆ ತೆರಳಿ ಜನರನ್ನು ಚದುರಿಸುವ ವೇಳೆಗೆ ಗಂಭೀರವಾಗಿ ಗಾಯಗೊಂಡಿದ್ದ ಈತ ಮೃತ ಪ್ರಾಯನಾಗಿದ್ದ ಕೂಡಲೆ ಆತನನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ತರಲಾದರೂ ಆ ವೇಳೆಗೆ ಆತ ಮೃತ ಪಟ್ಟಿದ್ದ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News