ಮಂಗಳೂರು : ಬೈಕ್ ಸ್ಕಿಡ್ - ಯುವಕ ಮೃತ್ಯು
Update: 2016-02-15 22:35 IST
ಮಂಗಳೂರು,ಫೆ.15: ನಗರದ ಶಿವಭಾಗ್ ನಿಂದ ಪಂಪ್‌ವೆಲ್‌ಗೆ ಒಳರಸ್ತೆಯಿಂದ ಬರುತ್ತಿದ್ದ ಬೈಕ್ ಸ್ಕಿಡ್ ಆದ ಪರಿಣಾಮ ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಇಂದು ವೆನ್‌ಲಾಕ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಕೊಪ್ಪಳ ಜಿಲ್ಲೆಯ ಕುಷ್ಟಗಿಯ ಯಮುನಪ್ಪ (30) ಎಂಬಾತನು ರವಿವಾರದಂದು ರಾತ್ರಿ ಬರುತ್ತಿದ್ದ ವೇಳೆ ಬೈಕ್ ಸ್ಕಿಡ್ ಆಗಿ ಅಪಘಾತ ಸಂಭವಿಸಿತ್ತು. ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ. ಮಂಗಳೂರು ಪೂರ್ವ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.