ಸೈಂಟ್ ಜೋಸೆಫ್ ಕಾಲೇಜು ಚಾಂಪಿಯನ್: ರಾಷ್ಟ್ರಮಟ್ಟದ ರೋಬೊ ವಾರ್
Update: 2016-02-15 23:22 IST
ಮಂಗಳೂರು, ಫೆ.15: ಮದ್ರಾಸ್ ಐಐಟಿಯಲ್ಲಿ ನಡೆದ ರಾಷ್ಟ್ರಮಟ್ಟದ ರೋಬೊ ವಾರ್ ಸ್ಪರ್ಧೆಯಲ್ಲಿ ಮಂಗಳೂರಿನ ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಮೆಕಾ ನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಾದ ಶ್ರೀಧರ ಎಚ್.ವೈ, ವಿಕಾಸ್, ವೆಂಕಟೇಶ್ ಮಯ್ಯ, ಮತ್ತು ವ್ನಿೇಶ್ ಕಾಮತ್ ಚಾಂಪಿಯನ್ ಶಿಪ್ ಪುರಸ್ಕಾರದೊಂದಿಗೆ 40 ಸಾವಿರ ರೂ. ನಗದು ಪ್ರಶಸ್ತಿಯನ್ನು ಪಡೆದಿದ್ದಾರೆ. ಎಸ್‌ಜೆಇಸಿ ಅಸಿಸ್ಟೆಂಟ್ ಪ್ರೊ. ಅನಿಲ್ ಮೆಲ್ವಿನ್ ಮಾರ್ಗದರ್ಶನದಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿದ ತಂಡಕ್ಕೆ ಕಾಲೇ ಜಿನ ವಿಭಾಗದ ಮುಖ್ಯಸ್ಥ ಡಾ.ಸುಧೀರ್ ಎಂ.ವಿ. ಪೋತ್ಸಾಹ ನೀಡಿದ್ದಾರೆ.
ಈ ತಂಡವು ಈ ಹಿಂದೆ ಎನ್‌ಟಿಕೆ, ಎಂಐಟಿಕೆ ಮಣಿಪಾಲ, ಹಾಸನ ಮಲ್ನಾಡ್ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ನಡೆದ ರೋಬೊ ವಾರ್ ಸ್ಪರ್ಧೆಗಳಲ್ಲೂ ಪ್ರಶಸ್ತಿ ಪಡೆದಿದೆ ಎಂದು ಪ್ರಕಟನೆ ತಿಳಿಸಿದೆ.