ಮಹೇಶ್ ಕಾಲೇಜ್: ಕ್ರೀಡಾಕೂಟ ಉದ್ಘಾಟನೆ
Update: 2016-02-15 23:25 IST
ಮಂಗಳೂರು, ಫೆ.15: ಮೌಲ್ಯಾಧಾರಿತ ಶಿಕ್ಷಣದೊಂದಿಗೆ ಕ್ರೀಡಾ ಚಟುವಟಿಕೆಯನ್ನು ರೂಢಿಸಿಕೊಂಡಾಗ ಮಾನಸಿಕ ಸ್ಥೈರ್ಯ ಹೆಚ್ಚಿಸಲು ಸಾಧ್ಯ ಎಂದು ಸುರತ್ಕಲ್ ಎನ್‌ಐಟಿಕೆ ದೈಹಿಕ ನಿರ್ದೇಶಕ ಶಿವರಾಮ್ ಎ. ಹೇಳಿದರು. ನಗರದ ಮಹೇಶ್ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್ ಮ್ಯಾನೇಜ್‌ಮೆಂಟ್‌ನ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಹೇರಾಲ್ಡ್ ಫೆರ್ನಾಂಡಿಸ್ ಅಧ್ಯಕ್ಷತೆ ವಹಿಸಿದ್ದರು. ಕ್ರೀಡಾ ಸಂಘದ ಸಂಯೊಜಕ ಶಿವಕುಮಾರ್ ಎಂ.ಕೆ., ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮೆಲ್ಡ್ರಿನ್ ಪಿಂಟೊ ಉಪಸ್ಥಿತರಿದ್ದರು. ಕ್ರೀಡಾ ಸಂಘದ ಕಾರ್ಯದರ್ಶಿ ಫರ್ಹಾನ್ ಕ್ರೀಡಾಪಟುಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಐಶ್ವರ್ಯಾ ಚಿಂಚಲ್‌ಕರ್ ಕಾರ್ಯಕ್ರಮ ನಿರೂಪಿಸಿದರು.