×
Ad

ಸುಳ್ಯ: ರಂಗಮನೆಯಲ್ಲಿ ‘ಸಾಂಸ್ಕೃತಿಕ ಉತ್ಸವ’ಕ್ಕೆ ಚಾಲನೆ

Update: 2016-02-15 23:29 IST

ಸುಳ್ಯ, ಫೆ.15: ಕಲಾವಿದರನ್ನು ಕೈಹಿಡಿದು ಮೇಲಕ್ಕೆತ್ತಿ ಎತ್ತರಕ್ಕೆ ಕೊಂಡೊಯ್ಯುವವರು ಕಲಾ ಭಿಮಾನಿಗಳು. ಅವರನ್ನು ಬೆಳೆಸುವ ಜವಾಬ್ದಾರಿ ಕಲಾಸಕ್ತರಿಗೆ ಇದೆ. ಅಂತಹ ಪ್ರತಿಭಾವಂತ ಕಲಾವಿದರಿಗೆ ಪ್ರೋತ್ಸಾಹ ಅಗತ್ಯ ಎಂದು ಹಿರಿಯ ರಂಗ ಕಲಾವಿದೆ, ರಾಜ್ಯಸಭಾ ಸದಸ್ಯೆ ಬಿ. ಜಯಶ್ರೀ ಹೇಳಿದರು.
ಸುಳ್ಯ ಸಾಂಸ್ಕೃತಿಕ ಕಲಾ ಕೇಂದ್ರ ರಂಗಮನೆಯಲ್ಲಿ ನಡೆಯುವ ರಾಜ್ಯ ಮಟ್ಟದ ಸಾಂಸ್ಕೃತಿಕ ಉತ್ಸವ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಕುವೆಂಪು ವಿಶ್ವ ವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ. ಕೆ. ಚಿದಾ ನಂದ ಗೌಡ ಸಾಂಸ್ಕೃತಿಕ ಉತ್ಸವ ಉದ್ಘಾಟಿಸಿದರು. ಉಡುಪಿ ರಂಗಭೂಮಿ ಪರವಾಗಿ ಗೌರವಾಧ್ಯಕ್ಷ ಡಾ. ಎಚ್. ಶಾಂತಾರಾಮ್‌ರನ್ನು ‘ರಂಗಮನೆ’ ಗೌರವ ನೀಡಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ನ.ಪಂ.ಅಧ್ಯಕ್ಷ ಪ್ರಕಾಶ್ ಹೆಗ್ಡೆ, ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ. ಸುಧಾಕರ್ ರೈ, ಸುಜನಾ ಸುಳ್ಯ ಮುಖ್ಯ ಅತಿಥಿಗಳಾಗಿದ್ದರು. ರಂಗಮನೆ ಅಧ್ಯಕ್ಷ ಜೀವನ್‌ರಾಂ ಸುಳ್ಯ ಸ್ವಾಗತಿಸಿ, ಡಾ. ಸುಂದರ್ ಕೇನಾಜೆ ವಂದಿಸಿದರು. ಡಾ. ವೀಣಾ ಕಾರ್ಯಕ್ರಮ ನಿರೂಪಿಸಿದರು. ಬಾಲಪ್ರತಿಭೆ ಹೇಮಂತ್ ಕುಮಾರ್ ಕೆಲಿಂಜರಿಂದ ಸ್ಯಾಕ್ಸೋಫೋನ್ ನಾದತರಂಗ, ವಿನ್ಯಾಸ್‌ಚಂದ್ರ ವೈ. ಅವರಿಂದ ಧರೆಗುರುಳಿದ ಸುಯೋಧನ ಏಕವ್ಯಕ್ತಿ ಪ್ರದರ್ಶನ, ಮೂಡುಬಿದಿರೆ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಅಭಿನಯಿಸಿದ ಜೀವನ್‌ರಾಂ ನಿರ್ದೇಶನದ ನಾಟಕ ‘ಧಾಂ ಧೂಂ ಸುಂಟರಗಾಳಿ’ ಪ್ರದರ್ಶನಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News