×
Ad

ಪೆರ್ಮನ್ನೂರು ಸಿಎಲ್‌ಸಿಯ 40ನೆ ವಾರ್ಷಿಕೋತ್ಸವ

Update: 2016-02-15 23:37 IST


ಉಳ್ಳಾಲ, ಫೆ.15: ಪೆರ್ಮನ್ನೂರು ಸಿಎಲ್‌ಸಿಯ 40ನೆ ವಾರ್ಷಿಕೋತ್ಸವವು ಪೆರ್ಮನ್ನೂರು ಇಗರ್ಜಿ ವಠಾರದಲ್ಲಿ ಇತ್ತೀಚೆಗೆ ನಡೆಯಿತು. ಮಂಗಳೂರು ಬಿಷಪ್ ಅಲೋ ಶಿಯಸ್ ಪಾವ್ಲ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಚಿವ ಯು.ಟಿ. ಖಾದರ್, ಸ್ಟೇನಿ ಡಿಸೋಜ ಚೆಂಗ್ಳೂರು, ಮ್ಯಾಕ್ಸಿಮ್ ವಿಸ್ಕಿತ್, ಜೆಬಿ ಸ್ದೂನ್ನಾ, ಎಡ್ವಿನ್ ಮಸ್ಕರೇನಸ್, ಹೆನ್ರಿ ಸಿಕ್ವೇರಾ, ರೂಪೇಶ್ ಮಾಡ್ತಾ, ಪ್ರವೀಣ್ ಜಾಯ್ ಸಲ್ಡಾನ, ಉಲ್ಲಾಸ್ ಡಿ ಕೋಸ್ತಾ, ಲುಕಸ್ ಡಿಸೋಜ, ಡಿಮಿಟ್ರಿಯನ್ ಡಿಸೋಜ ಉಪಸ್ಥಿತರಿದ್ದರು. ಈ ಸಂದರ್ಭ ಬಡ ವಿದ್ಯಾರ್ಥಿಗಳ ಶಿಕ್ಷಣ ನಿಧಿಯನ್ನು ಉದ್ಘಾಟಿಸಲಾಯಿತು. ಸಿಎಲ್‌ಸಿ ಅಧ್ಯಕ್ಷ ಜೋಸೆಫ್ ಡಿಸೋಜ ಸ್ವಾಗತಿಸಿದರು. ಕಾರ್ಯದರ್ಶಿ ರೊನಾಲ್ಡ್ ಅವೊಸೆ ವರದಿ ವಾಚಿಸಿದರು. ಸಹ ಕಾರ್ಯದರ್ಶಿ ಹೆರಾಲ್ಡ್ ಸೆರಾ ವಂದಿಸಿದರು. ಮೆಲ್ವಿನ್ ಡಿಸೋಜ, ಆಲ್ವಿನ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News