ವಿಜ್ಞಾನದ ಅವಕಾಶಗಳನ್ನು ಸದುಪಯೋಗಪಡಿಸಿ
ಮೂಡುಬಿದಿರೆ,ಫೆ.15: ‘ವಿಜ್ಞಾನದಲ್ಲಿ ಸಂಶೋಧನೆಗೆ ಯುವಜನರು ಆಸಕ್ತಿ ತೋರುವ ಮೂಲಕ ವಿಜ್ಞಾನದ ಅನೇಕ ವಿಭಾಗಗಳಲ್ಲಿರುವ ಅಪಾರ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಸಂಶೋಧನೆ ನಡೆಸಲು ಆಸಕ್ತಿ ತೋರಬೇಕು. ಈ ಮೂಲಕ ದೇಶದ ಪ್ರಗತಿ ಸಾಧಿಸಲು ಮುಂದಾಗಬೇಕು ಎಂದು ಕಾರ್ಕಳ ಸೈನ್ಸ್ ಫೋರಂನ ಅಧ್ಯಕ್ಷ ಇ. ಜನಾರ್ದನ ಕರೆ ನೀಡಿದರು.
ಮಹಾವೀರ ಕಾಲೇಜಿನ ಸೈನ್ಸ್ ಆ್ಯಂಡ್ ಐಟಿ ಕ್ಲಬ್, ಮಂಗಳೂರು ವಿ.ವಿ. ಭೌತ ಶಾಸ್ತ್ರ ಅಧ್ಯಾಪಕರ ಸಂಘ ಮತ್ತು ಕಾರ್ಕಳ ಸೈನ್ಸ್ ಫೋರಂನ ಸಹಭಾಗಿತ್ವದಲ್ಲಿ ಏರ್ಪಡಿಸಿದ ಮಂಗಳೂರು ವಿ.ವಿ. ಮಟ್ಟದ, ಭೌತಶಾಸ್ತ್ರ ಕುರಿತಾದ ಪ್ರಬಂಧ ಮಂಡನೆ ಮತ್ತುಕ್ವಿಝ್ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾಲೇಜಿನ ಪ್ರಾಚಾರ್ಯ ಪ್ರೊ.ಎಚ್.ಸಿ. ದೀಕ್ಷಿತ್ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ನಾಯಕ ನೀಲ್ ಕೆನೆತ್ ವಾಸ್, ಭೌತಶಾಸ್ತ್ರ ಅಧ್ಯಾ ಪಕರ ಸಂಘದ ಅಧ್ಯಕ್ಷ ಶಿವಪ್ರಸಾದ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ಹರೀಶ್, ಸ್ಪರ್ಧೆಯ ಸಂಯೋಜಕಿ ಆಶಾ ಶ್ಯಾಲೆಟ್ ಡಿಸೋಜ ಉಪಸ್ಥಿತರಿದ್ದರು.