×
Ad

ಮಂಗಳೂರು : ಮನಪಾ ಸದಸ್ಯರ ಕಡೆಗಣನೆ ಆರೋಪ ;ಬಿಜೆಪಿ ,ಜೆಡಿಎಸ್ ಸದಸ್ಯರ ಧರಣಿ

Update: 2016-02-16 18:54 IST

ಮಂಗಳೂರು,ಫೆ.16:ಮಂಗಳೂರು ಪಾಲಿಕೆಯ ಸದಸ್ಯರನ್ನು ಕಡೆಗಣಿಸಿ ಕ್ರೀಯಾಯೋಜನೆಯನ್ನು ಆಡಳಿತದಲ್ಲಿರುವ ಕಾಂಗ್ರೆಸ್ ಪಕ್ಷದ ಮೇಯರ್ ರೂಪಿಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಮಂಗಳೂರು ಮಹಾನಗರ ಪಾಲಿಕೆಯ ಎದುರು ಧರಣಿ ನಡೆಸಿ ಪ್ರತಿಭಟಿಸಿದರು.ಕೇಂದ್ರ ಸರಕಾರದ 14ನೆ ಹಣಕಾಸು ಯೋಜನೆ ಮತ್ತು ರಾಜ್ಯ ಸರಕಾರದ ಎಸ್‌ಎಫ್‌ಸಿ ಅನುದಾನ ಕಳೆದ ಜೂನ್ ತಿಂಗಳಲ್ಲಿ ಪಾಲಿಕೆಗೆ ಬಂದಿದೆ.ಈ ಬಗ್ಗೆ ಕ್ರೀಯಾ ಯೋಜನೆಯನ್ನು ಸಾಮನ್ಯ ಸಭೆಯಲ್ಲಿ ಮಂಡಿಸದೆ ಇಬ್ಬರು ಶಾಸಕರ ನಿರ್ದೇಶನದಂತೆ ಕಾಮಗಾರಿಗಳ ಪಟ್ಟಿ ತಯಾರಿಸಲಾಗಿದೆ.ಈ ಯೋಜನೆ ರಾಜಕೀಯ ಪ್ರೇರಿತವಾಗಿದೆ.ಉದ್ಯಮಿಗಳಿಗೆ ಮತ್ತು ಶ್ರೀಮಂತರಿಗೆ ಅನುಕೂಲವಾಗುವಂತೆ ಕ್ರೀಯಾಯೋಜನೆಯನ್ನು ರೂಪಿಸಲಾಗಿದೆ.

ಜನಸಾಮಾನ್ಯರ ಹಿತಾಸಕ್ತಿಯನ್ನು ಕಡೆಗಣಿಸಲಾಗಿದೆ.ಪಾಲಿಕೆಗೆ ಆಯ್ಕೆಯಾದ ಚುನಾಯಿತ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಮನಪಾದ ಆಡಳಿತ ಪಕ್ಷ ಕಾರ್ಯನಿರ್ವಹಿಸುತ್ತಿರುವುದು ಕಾನೂನು ಬಾಹಿರ ಕ್ರಮವಾಗಿದೆ.ಪಾಲಿಕೆಯಲ್ಲಿ ಕಾನೂನು ಬಾಹಿರವಾಗಿ ಕಾಮಗಾರಿಗಳನ್ನು ಕೈ ಗೆತ್ತಿಕೊಳ್ಳಲಾಗುತ್ತಿದೆ.ಕಸವಿಲೇವಾರಿಗೆ ನಿಯೋಜಿಸಲಾದ ಗುತ್ತಿಗೆ ಸಂಸ್ಥೆಗೆ ಹಣಪಾವತಿಯಾಗಲು ಬಾಕಿ ಇದೆ.ಪಾಲಿಕೆಯಲ್ಲಿ ಈ ರೀತಿಯ ಆಶಿಸ್ತು ಮುಂದುವರಿದರೆ ಪಾಲಿಕೆಯ ವಿರುದ್ಧ ಮುಂದಿನ ಹಂತದಲ್ಲಿ ತೀವ್ರ ರೀತಿಯ ಪ್ರತಿಭಟನೆ ನಡೆಸಲಾಗುವುದು ಎಂದು ಮನಪಾ ವಿಪಕ್ಷ ನಾಯಕ ಸುಧೀರ್ ಶೆಟ್ಟಿ ಕಣ್ಣೂರು ತಿಳಿಸಿದ್ದಾರೆ.ಪ್ರತಿಭಟನೆಯಲ್ಲಿ ಬಿಜೆಪಿಯ ಮನಪಾ ಸದಸ್ಯರಾದ ಹೇಮಲತಾ,ಪೂರ್ಣಿಮಾ,ರೂಪ ಡಿ ಬಂಗೇರ,ಸುಮಿತ್ರ,ಜಯಂತಿ ಆಚಾರ್,ದಿವಾಕರ ಪಾಂಡೇಶ್ವರ,ರಾಜೇಶ್ ಶೆಟ್ಟಿ,ಹರೀಶ್ ಶೆಟ್ಟಿ,ವಿಜಯ ಕುಮಾರ್ ಶೆಟ್ಟಿ,ಸುರೇಂದ್ರ ಶೆಟ್ಟಿ,ಜೆಡಿಎಸ್‌ನ ಅಝೀಝ್ ಕುದ್ರೋಳಿ,ರಮಿಝಾ ಬಾನು ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News