ಬಂಟ್ವಾಳ : ಮತಯಂತ್ರಗಳ ಪರಿಶೀಲನೆ
Update: 2016-02-16 19:20 IST
ಬಂಟ್ವಾಳ, ಫೆ. 16: ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕಿನ ಮೊಡಂಕಾಪು ಇನ್‌ಫೆನ್ಟ್ ಜೀಸಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಂಗಳವಾರ ನಡೆದ ಮತಯಂತ್ರಗಳಿಗೆ ಅಭ್ಯರ್ಥಿಗಳ ಹೆಸರು ಜೋಡಣೆ ಕಾರ್ಯವನ್ನು ಚುನಾವಣಾಧಿಕಾರಿಯೂ ಆದ ಮಂಗಳೂರು ಸಹಾಯಕ ಕಮಿಷನರ್ ಡಾ. ಅಶೋಕ್ ಡಿ.ಆರ್., ತಹಶೀಲ್ದಾರ್ ಪುರಂದರ ಹೆಗಡೆ ಪರಿಶೀಲಿಸಿದರು.