ಮಂಗಳೂರು : ಅಂಜುಮಾನ್ ಖುವ್ವತುಲ್ ಇಸ್ಲಾಂನ 48ನೆ ವಾರ್ಷಿಕೋತ್ಸವಜೋಕಟ್ಟೆಯಲ್ಲಿ ಇಂದಿನಿಂದ ಧಾರ್ಮಿಕ ಕಾರ್ಯಕ್ರಮ
ಮಂಗಳೂರು, ಫೆ. 16: ಜೋಕಟ್ಟೆಯ ಅಂಜುಮಾನ್ ಖುವ್ವತುಲ್ ಇಸ್ಲಾಂನ 48ನೆ ವಾರ್ಷಿಕೋತ್ಸವದ ಅಂಗವಾಗಿ ಅಂಜುಮಾನ್ ಯತೀಂ ಮತ್ತು ಮಸಾಕೀನ್ ಸೆಂಟರ್‌ನ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ, ರಿಫಾಯಿ ರಾತೀಬ್ ಹಾಗೂ ಧಾರ್ಮಿಕ ಪ್ರವಚನ ಕಾರ್ಯಕ್ರಮಗಳು ಫೆಬ್ರವರಿ 17ರಿಂದ 21ರವರೆಗೆ ನಡೆಯಲಿವೆ.ಫೆ. 17ರಂದು ರಾತ್ರಿ 8:30ಕ್ಕೆ ಜೋಕಟ್ಟೆಯ ಮುಹಿಯುದ್ದೀನ್ ಹೊಸ ಜುಮಾ ಮಸೀದಿಯ ಖತೀಬ್ ಇ.ಎಂ.ಅಬ್ದುರ್ರಹ್ಮಾನ್ ದಾರಿಮಿ ಅಲ್ ಹಾಮಿದಿ ಅವರ ದುವಾದೊಂದಿಗೆ ಜೋಕಟ್ಟೆಯ ಮುಹಿಯುದ್ದೀನ್ ಹಳೆ ಜುಮಾ ಮಸೀದಿಯ ಖತೀಬ್ ಹಾಜಿ ಎ.ಎಂ.ಅಬ್ದುಲ್ಲಾ ಮದನಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮೂಡಬಿದ್ರೆ ಮುಹಿಸ್ಸುನ್ನಃ ದರ್ಸ್‌ನ ಮುದರ್ರಿಸ್ ನೌಫಲ್ ಸಖಾಫಿ ಕಳಸ ಪ್ರವಚನ ನೀಡಲಿದ್ದಾರೆ.
ಜೋಕಟ್ಟೆ ಅಂಜುಮಾನ್ ಖುವ್ವತುಲ್ ಇಸ್ಲಾಂನ ಉಪಾಧ್ಯಕ್ಷ ಹಾಜಿ ಬಿ.ಎಸ್.ಹುಸೇನ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.18ರಂದು ತನ್ಯಾಪುರಂನ ಅಲಿ ಅಕ್ಬರ್ ಬಾಖವಿ ಅವರಿಂದ ಹಾಗೂ 19ರಂದು ಮಲಪ್ಪುರಂನ ಮನ್‌ಹಾಜುರ್ರಶಾದ್ ಇಸ್ಲಾಮಿಕ್ ಕಾಲೇಜಿನ ಪ್ರಾಂಶುಪಾಲ ಜಾಬಿರ್ ಹುದವಿ ತ್ರಿಕರಿಪುರ ಅವರಿಂದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.20ರಂದು ನಡೆಯುವ ಯತೀಂ ಮತ್ತು ಮಸಾಕೀನ್ ಸೆಂಟರ್ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ ಕಾರ್ಯಕ್ರಮದ ಉದ್ಘಾಟನೆಯನ್ನು ಜೋಕಟ್ಟೆ ಈದ್ಗಾ ಜುಮಾ ಮಸೀದಿಯ ಖತೀಬ್ ಪಿ.ಎಂ.ಅಬ್ದುಲ್ಲಾಹಿ ನಈಮಿ ನೆರವೇರಿಸಲಿದ್ದಾರೆ. ಅಸ್ಸಯ್ಯಿದ್ ಕೆ.ಎಸ್.ಅಲಿ ತಂಙಳ್ ಕುಂಬೋಳ್ ಅವರು ದುವಾ ಆಶೀರ್ವಚನ ನೀಡಲಿದ್ದು, ಹಾಜಿ ಡಿ.ಅಬ್ದುರ್ರಹ್ಮಾನ್ ದಾರಿಮಿ, ಎಂ.ಎಸ್.ಅನ್ಸಾರ್ ವೌಲವಿ ಅವರು ಭಾಗವಹಿಸಲಿದ್ದಾರೆ.
21ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಸಂಜೆ 4:30ಕ್ಕೆ ಜೋಕಟ್ಟೆ ಯಹ್ಯಾ ಉಸ್ತಾದ್ ನೇತೃತ್ವದಲ್ಲಿ ಅಂಜುಮಾನ್ ಯತೀಂ ಖಾನದಲ್ಲಿ ದಫ್ ರಾತೀಬ್ ಹಾಗೂ ಸಂಜೆ 7 ಗಂಟೆಗೆ ಹೊಸ ಜುಮಾ ಮಸೀದಿಯಲ್ಲಿ ನಡೆಯುವ ರಿಫಾಯಿ ರಾತೀಬ್ ಕಾರ್ಯಕ್ರಮದ ನೇತೃತ್ವವನ್ನು ಆತೂರು ಬದ್ರಿಯಾ ಜುಮಾ ಮಸೀದಿಯ ಮುದರ್ರಿಸ್ ಅಸ್ಸಯ್ಯಿದ್ ಜುನೈದ್ ಜಿಫ್ರಿ ಮುತ್ತುಕೋಯ ತಂಙಳ್ ವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.