ಚುನಾವಣೆ ಹಿನ್ನೆಲೆ: ದ.ಕ.-ಹಾಸನ ಗಡಿಯಲ್ಲಿ ಎಎನ್‌ಎಫ್ ಕೂಂಬಿಂಗ್
Update: 2016-02-16 23:01 IST
ಸುಬ್ರಹ್ಮಣ್ಯ, ಫೆ.16: ಜಿಪಂ ಮತ್ತು ತಾಪಂ ಚುನಾವಣೆ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಹಾಸನ ಮತ್ತು ದ.ಕ. ಜಿಲ್ಲೆಯ ಗಡಿಭಾಗದ ಮೀಸಲು ಅರಣ್ಯದಲ್ಲಿ ಎಎನ್‌ಎಫ್ ಸಿಬ್ಬಂದಿ ಮಂಗಳವಾರದಿಂದ ಕೂಂಬಿಂಗ್ ಆರಂಭಿಸಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಪುತ್ತೂರು-ಸುಳ್ಯ ಗಡಿಭಾಗದ ಚೇರು, ಎರ್ಮಾಯಿಲ್, ಭಾಗ್ಯ ನಡುತೋಟ ಮುಂತಾದ ಪ್ರದೇಶಗಳಲ್ಲಿ ನಕ್ಸಲರು ಕಾಣಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಈ ಪ್ರದೇಶಗಳಲ್ಲಿ ಹಾಗೂ ನಕ್ಸಲರು ಕಾಣಿಸಿಕೊಂಡ ಎರಡೂ ಜಿಲ್ಲೆಗಳ ಗಡಿಭಾಗದ ಆಯಾಕಟ್ಟಿನ ಜಾಗಗಳಲ್ಲಿ ಕಾರ್ಕಳ ಬೆಟಾಲಿಯನ್‌ನ ಎಎನ್‌ಎಫ್‌ನ ಪಿಎಸ್ಸೈ ಶಿವರಾಜ್ ನೇತೃ ತ್ವದ 13 ಮಂದಿಯ ತಂಡ ಮತ್ತು ಎಎನ್‌ಎಸ್ ನ ಆರು ಮಂದಿ ಹೀಗೆ ಒಟ್ಟು 19 ಮಂದಿಯ ಎರಡು ತಂಡ ಮೀಸಲು ಅರಣ್ಯದಲ್ಲಿ ಕೂಂಬಿಂಗ್ ನಡೆಸುತ್ತಿದೆ. ಬಾಳುಗೋಡು, ಕಲ್ಮಕಾರು ಮುಂತಾದೆಡೆಗಳಿಗೂ ತೆರಳಿ ಕೂಂಬಿಂಗ್ ನಡೆಸಲಿದೆ.