ಈಜು ಸ್ಪರ್ಧೆಯಲ್ಲಿ ಲೂರ್ಡ್ಸ್ ಸೆಂಟ್ರಲ್ ಶಾಲಾ ಮಕ್ಕಳ ಸಾಧನೆ
ಮಂಗಳೂರು, ಫೆ.16: ಇತ್ತೀಚೆಗೆ ಕ್ರೀಡಾ ಭಾರತಿ ಮತ್ತು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ವತಿಯಿಂದ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕಿರಿಯರ ಒಲಂಪಿಕ್ಸ್‌ನಲ್ಲಿ ನಗರದ ಲೂರ್ಡ್ಸ್ ಸೆಂಟ್ರಲ್ ಶಾಲೆಯ ಇಶಿತಾ 50 ಮೀ. ಫ್ರೀಸ್ಟೈಲ್, 50 ಮೀ. ಬಟರ್ ಫ್ಲೈ 50 ಮೀ. ಬ್ರೆಸ್ಟ್ ಸ್ಟೋಕ್, 4್ಡ50 ಮೀ. ಫ್ರೀ ಸ್ಟೈಲ್ ರಿಲೇಯಲ್ಲಿ ಪ್ರಥಮ ಹಾಗೂ 4್ಡ50 ಮೀ. ಮೆಡ್ಲೆ ರಿಲೇ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ರಿತಿಕಾ ಶೆಟ್ಟಿ 50ಮೀ ಬ್ಯಾಕ್ ಸ್ಟ್ರೋಕ್, 25ಮೀ ಫ್ರೀ ಸ್ಟೈಲ್, 4್ಡ50 ಮೀ. ಫ್ರೀ ಸ್ಟೈಲ್ ರಿಲೇಯಲ್ಲಿ ಪ್ರಥಮ ಹಾಗೂ 4್ಡ50 ಮೀ ಮೆಡ್ಲೆ ರಿಲೇ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಡಿಯೋನಾ ರಿಯಾ ಮಿನೇಜಸ್ 4್ಡ50 ಮೀ. ಫ್ರೀ ಸ್ಟೈಲ್ ರಿಲೇಯಲ್ಲಿ ಪ್ರಥಮ, 50 ಮೀ. ಫ್ರೀಸ್ಟೈಲ್, 50 ಮೀ. ಬ್ರೆಸ್ಟ್ ಸ್ಟೋಕ್, 4್ಡ50 ಮೀ. ಮೆಡ್ಲೆ ರಿಲೇಯಲ್ಲಿ ದ್ವಿತೀಯ ಸ್ಥಾನ, 50ಮೀ ಬ್ಯಾಕ್ ಸ್ಟ್ರೋಕ್‌ನಲ್ಲಿ ತೃತೀಯ ಸ್ಥಾನ ಪಡೆದಿರುತ್ತಾರೆ. ಪ್ರಣವ್ ಶೆಟ್ಟಿ 50 ಮೀ. ಬ್ರೆಸ್ಟ್ ಸ್ಟೋಕ್‌ನಲ್ಲಿ ತೃತೀಯ ಸ್ಥಾನ ಪಡೆದಿರುತ್ತಾರೆ. ಕೆ.ಎಸ್. ವೈಷ್ಣವಿ 50 ಮೀ. ಬಟರ್ ಫ್ಲೈ, 50ಮೀ ಬ್ಯಾಕ್ ಸ್ಟ್ರೋಕ್, 4್ಡ50 ಮೀ ಮೆಡ್ಲೆ ರಿಲೇ ದ್ವಿತೀಯ, 25ಮೀ ಫ್ರೀ ಸ್ಟೈಲ್, 4್ಡ50 ಮೀ. ಫ್ರೀ ಸ್ಟೈಲ್ ರಿಲೇಯಲ್ಲಿ ತೃತೀಯ ಸ್ಥಾನ ಪಡೆದಿರುತ್ತಾರೆ. ಏಂಜೆಲಾ ಡಿಸೋಜಾ 25ಮೀ ಫ್ರೀ ಸ್ಟೈಲ್, 50 ಮೀ. ಫ್ರೀಸ್ಟೈಲ್, 50 ಮೀ. ಬ್ರೆಸ್ಟ್ ಸ್ಟೋಕ್‌ನಲ್ಲಿ ದ್ವಿತೀಯ, 4್ಡ 50 ಮೀ. ಫ್ರೀ ಸ್ಟೈಲ್ ರಿಲೇಯಲ್ಲಿ ತೃತೀಯ ಸ್ಥಾನ ಪಡೆದಿರುತ್ತಾರೆ.