ಕಾವ್ಯ ಜನಮನ ತಲುಪಲಿ: ಡುಂಡಿರಾಜ್
ಮಂಗಳೂರು, ಫೆ.16: ಕವಿಗಳು ತಮ್ಮ ಕಾವ್ಯಕೃತಿಗಳನ್ನು ಕೇಳುಗರಿಗೆ ಅರ್ಥ ವಾಗುವಂತೆ ಸರಿಯಾಗಿ ಮಂಡಿ ಸುವುದರ ಮೂಲಕ ಕಾವ್ಯವನ್ನು ಜನಸಾಮಾನ್ಯರಿಗೆ ಪರಿಣಾಮಕಾರಿಯಾಗಿ ತಲುಪಿಸುವುದರ ಕಡೆಗೆ ಗಮನ ಹರಿಸಬೇಕಾಗಿದೆ ಎಂದು ಪ್ರಸಿದ್ಧ ಹನಿಗವಿ ಎಚ್. ಡುಂಡಿರಾಜ್ ಹೇಳಿದರು.
ನಗರದ ಕಾವೂರಿನಲ್ಲಿರುವ ಅಂಬಾಭವನದಲ್ಲಿ ಭೂಮಿಗೀತ ವೇದಿಕೆಯ ವತಿಯಿಂದ ಆಯೋಜಿಸಲಾದ ಕವಿಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಾಜದ ವಿಕಾಸದಲ್ಲಿ ಕಾವ್ಯದ ಪಾತ್ರ ಮಹತ್ವದ್ದಾಗಿದೆ. ಆದರೆ ಅದರ ಧ್ವನಿ ಇಂದು ಕ್ಷೀಣಿಸುತ್ತಿದೆ. ಕವಿಗಳು ದೊಡ್ಡದಾಗಿ ಮತ್ತು ಪರಿಣಾಮಕಾರಿಯಾಗಿ ಇಂದು ಮಾತನಾಡುವ ಅಗತ್ಯವಿದೆ ಎಂದು ಅವರು ನುಡಿದರು.ಹಿರಿಯ ಕವಿ ಹಾಗೂ ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥ ಡಾ.ವಸಂತಕುಮಾರ್ ಪೆರ್ಲ ಆಶಯ ಭಾಷಣ ಮಾಡಿದರು. ‘ಕನ್ನಡ ಕಾವ್ಯ-ಇಂದಿನ ನೆಲೆಗಳು’ ಎಂಬ ವಿಷಯದ ಕುರಿತು ನಿವೃತ್ತ ಪ್ರಾಂಶುಪಾಲ, ವಿಮರ್ಶಕ ಡಾ.ಸತ್ಯನಾರಾಯಣ್ ಮಲ್ಲಿಪಟ್ಟಣ ಮಾತನಾಡಿದರು
ಕವಿಗೋಷ್ಠಿಯಲ್ಲಿ ಶೈಲಜಾ ಪುದುಕೋಳಿ, ಎನ್. ಭಟ್, ರಾಮಚಂದ್ರ ಭಟ್ ಗುಣಾಜೆ, ರಘು ಇಡ್ಕಿದು, ಬದ್ರುದ್ದೀನ್ ಕೂಳೂರು, ಅರ್ಥಾ ಪೆರ್ಲ, ಅಂಡಾಲ ಗಂಗಾಧರ ಶೆಟ್ಟಿ, ಶಾರದಾ ಎಸ್.ಶೆಟ್ಟಿ, ಸುಮಂಗಲಾ ಕೆ.ನಾಯ್ಕ್, ಅಯನಾ ಪೆರ್ಲ, ಮಾಲತಿ ಶೆಟ್ಟಿ ಮಾಣೂರು, ಕೆ.ಶೈಲಾಕುಮಾರಿ, ಹರಿಯಪ್ಪ ಪೇಜಾವರ, ಚಂದ್ರಾವತಿ, ರಾಘವೇಂದ್ರಪ್ರಸಾದ್ ಮತ್ತು ಕಾಸರಗೋಡು ಅಶೋಕ್‌ಕುಮಾರ್ ತಮ್ಮ ಸ್ವರಚಿತಕವಿತೆಗಳನ್ನು ವಾಚಿಸಿದರು. ಅಕ್ಷತಾ ಕುಡ್ಲ ಜಾನಪದ ಗೀತೆಗಳನ್ನುಹಾಡಿದರು. ದೇವರಾಜ ಮಾಣಾಯಿ ಸ್ವಾಗತಿಸಿದರು. ಅಂಬಾ ಭವನದ ಶಾರದಾ ಎಸ್.ಶೆಟ್ಟಿ ವಂದಿಸಿದರು.