ಭಯೋತ್ಪಾದನೆ ವಿರುದ್ಧ ಸೈಕಲ್ ರ್ಯಾಲಿ
Update: 2016-02-16 23:17 IST
ಉಳ್ಳಾಲ. ಫೆ, 16: ಎಸ್ಸೆಸ್ಸೆಫ್ ರಾಜ್ಯ ಸಮಿತಿ ಘೋಷಿಸಿರುವ ಭಯೋತ್ಪಾದನೆ ವಿರುದ್ಧ ಜನಾಂದೊಲನದ ಅಂಗವಾಗಿ ಎಸ್ಸೆಸ್ಸೆಫ್ ಅಳೇಕಲ ಶಾಖೆಯ ವತಿಯಿಂದ ವಿದ್ಯಾರ್ಥಿಗಳಿಂದ ಸೈಕಲ್ ರ್ಯಾಲಿ ನಡೆಯಿತು.
ಅಬೂ ಝಿಯಾದ್ ಮದನಿ ಪಟ್ಟಾಂಬಿ, ಅಳೇಕಲ ಹಝ್ರತ್ ಅಚ್ಚೇಸಾಹಿಬ್ ವಲಿಯುಲ್ಲಾಹಿ ದರ್ಗಾ ಝಿಯಾರತ್ ನೆರವೇರಿಸಿ ರ್ಯಾಲಿಗೆ ಚಾಲನೆ ನೀಡಿದರು. ಎಸ್ಸೆಸ್ಸೆಫ್ ತೊಕ್ಕೊಟ್ಟು ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಜಾಫರ್ ಯು.ಎಸ್., ಎಸ್ಸೆಸ್ಸೆಫ್ ಅಳೆಕಲ ಶಾಖೆಯ ಪ್ರಧಾನ ಕಾರ್ಯದರ್ಶಿ ಆರೀಫ್, ಸ್ಥಳೀಯರಾದ ಫಾರೂಕ್ ಯು.ಡಿ., ಇಬ್ರಾಹೀಂ ಯು.ಡಿ., ಅಶ್ರಫ್, ಲತೀಫ್, ರಿಯಾನ್, ಹನೀಫ್ ಮುಸ್ಲಿಯಾರ್, ಶಫೀಖರ್ರ್, ನಾಫಿ, ಆಶಿಕ್, ಶಾಕಿರ್ ಉಪಸ್ಥಿತರಿದ್ದರು.