×
Ad

ಸಂಪ್ಯದಲ್ಲಿ ಉಲಮಾ ಅನುಸ್ಮರಣಾ ಸಂಗಮ

Update: 2016-02-16 23:18 IST


ಪುತ್ತೂರು, ಫೆ.16: ಸಂಪ್ಯ ಎಸ್ಸೆಸ್ಸೆಎಫ್ ಮತ್ತು ಎಸ್‌ವೈಎಸ್ ವತಿಯಿಂದ ತಾಜುಲ್ ಉಲಮಾ, ಶಂಸುಲ್ ಉಲಮಾ, ನೂರುಲ್ ಉಲಮಾ ಹಾಗೂ ಪೊಸೊಟ್ ತಂಙಳ್ ಅನುಸ್ಮರಣಾ ಸಂಗಮವು ಇತ್ತೀಚೆಗೆ ಸಂಪ್ಯ ಮಸೀದಿ ಮುಂಭಾಗದ ಮರ್‌ಹೂಂ ಬಿ.ಕೆ. ಉಸ್ತಾದ್ ವೇದಿಕೆಯಲ್ಲಿ ನಡೆಯಿತು. ಬಿ.ಕೆ ಉಸ್ತಾದ್ ಅವರ ಸಹೋದರ ಬಿ.ಕೆ.ಮಹ್‌ಮೂದ್ ಮುಸ್ಲಿಯಾರ್ ದುವಾ ನೆರವೇರಿಸಿದರು. ಅಬುಲ್ ಬುಶ್‌ರಾ ಬಿ.ಕೆ. ಅಬ್ದುರ್ರಹ್ಮಾನ್ ಅಧ್ಯಕ್ಷತೆ ವಹಿಸಿದ್ದರು. ಹಾಫಿಝ್‌ನಝೀರ್ ಅಹ್ಮದ್ ಸಖಾಫಿ ಕಮ್ಮಾಡಿ ಕಾರ್ಯಕ್ರಮ ಉದ್ಘಾಟಿಸಿದರು. ಮುಹಮ್ಮದ್ ಅಲಿ ಸಖಾಫಿ ಸುರಿಬೈಲು ಮುಖ್ಯ ಪ್ರಭಾಷಣ ಮಾಡಿದರು. ಸಂಘಟನೆಯ ಪದಾಧಿಕಾರಿಗಳಾದ ಇಕ್ಬಾಲ್ ಬಪ್ಪಳಿಗೆ, ಸಿದ್ದೀಕ್ ಹಾಜಿ ಕಬಕ, ಸಲೀಂ, ಶಫೀಕ್ ಈಶ್ವರಮಂಗಲ, ಹಂಝ ಸಂಪ್ಯ, ಅಬೂಬಕ್ಕರ್ ಸಂಪ್ಯ, ಸಿದ್ದೀಕ್ ವಾಗ್ಲೆ, ಅಜೀಝ್ ಕಲ್ಲರ್ಪೆ ಉಪಸ್ಥಿತರಿದ್ದರು. ಅಬ್ದುರ್ರಶೀದ್ ಮದನಿ ಸ್ವಾಗತಿಸಿದರು. ಬಿ.ಎ. ನೌಫಲ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News