ಕಲ್ಲಾಪು: ರೋಗಿಗಳಿಗೆ ಸಹಾಯಧನ ವಿತರಣೆ
ಉಳ್ಳಾಲ, ಫೆ.16: ಇಂದು ಕಿಡ್ನಿ ಮತ್ತು ಕ್ಯಾನ್ಸರ್ ರೋಗದಿಂದ ಹಲವರು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇಂತಹ ರೋಗಗಳು ಜನರನ್ನು ಬಡತನಕ್ಕೆ ದೂಡುತ್ತದೆ. ಹಾಗಾಗಿ ಇವರಿಗೆ ನೆರವು ನೀಡುವ ಕಾರ್ಯಕ್ರಮವನ್ನು ಮಾಡಬೇಕಾಗಿದೆ ಎಂದು ಸಚಿವ ಯು.ಟಿ ಖಾದರ್ ಹೇಳಿದರು.
ಕಲ್ಲಾಪು ಆಝಾದ್ ಮೈದಾನದಲ್ಲಿ ನಡೆದ ಕಲ್ಲಾಪು ಸೇವಾ ಸಮಿತಿ ಪೆರ್ಮನ್ನೂರು ಇದರ ಆಶ್ರಯದಲ್ಲಿ ಕ್ಯಾನ್ಸರ್ ಮತ್ತು ಕಿಡ್ನಿ ರೋಗಗಳಿಗೆ ತುತ್ತಾದ ಬಡ ರೋಗಿಗಳಿಗೆ ಸಹಾಯಧನ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬಿಪಿಎಲ್ ಕಾರ್ಡ್‌ಗಳಿಗೆ ಉಚಿತ ಚಿಕಿತ್ಸೆ ಮತ್ತು ಔಷಧಿ ವಿತರಣೆ ಮಾಡುವ ಯೋಜನೆಯನ್ನು ಸರಕಾರ ಹಮ್ಮಿಕೊಂಡಿದೆ. ಆದರೆ ಮಾಹಿತಿ ಕೊರತೆಯಿಂದ ಬಡ ರೋಗಿಗಳು ಸರಕಾದ ಯೋಜನೆಯಿಂದ ವಂಚಿತರಾಗುತ್ತಿದ್ದಾರೆ. ಇದರಿಂದ ಬಹಳಷ್ಟು ಜನರು ಸಂಕಷ್ಟಕೀಡಾಗುತ್ತಾರೆ ಎಂದು ಖಾದರ್ ನುಡಿದರು.
ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮುಹಮ್ಮದ್ ಮುಕ್ಕಚೇರಿ, ನಗರಸಭಾ ಸದಸ್ಯ ದಿನೇಶ್ ರೈ, ವಕ್ಫ್ ಬೋರ್ಡ್ ಸಲಹಾ ಸಮಿತಿಯ ಉಪಾಧ್ಯಕ್ಷ ಮುಹಮ್ಮದ್ ಶರೀಫ್, ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಪತ್ತಾಕ್, ಪುರಸಭೆಯ ಮಾಜಿ ಅಧ್ಯಕ್ಷ ಬಾಜಿಲ್ ಡಿಸೋಜ, ಇಸ್ಮಾಯೀಲ್, ಅಖಿಲ ಭಾರತ ಬ್ಯಾರಿ ಪರಿಷತ್‌ನ ಉಪಾಧ್ಯಕ್ಷ ಅಬ್ದುಲ್ ಅಝೀಝ್ ಹಕ್, ಉದ್ಯಮಿಗಳಾದ ನಾಸಿರ್ ಮೊಯ್ದಿನ್, ಇಸ್ಮಾಯೀಲ್, ಸೋಮೇ ಶ್ವರ ಗ್ರಾಪಂ ಮಾಜಿ ಸದಸ್ಯ ಸತೀಶ್ ಉಳ್ಳಾಲ್, ಜೆ. ಮುಹಮ್ಮದ್, ಉಳ್ಳಾಲ ದರ್ಗಾ ಸಮಿತಿ ಸದಸ್ಯ ಹಮೀದ್ ಕಲ್ಲಾಪು, ಉಳ್ಳಾಲ ಬ್ಲಾಕ್ ಅಲ್ಪಸಂಖ್ಯಾತ ಘಟಕದ ಮಾಜಿ ಅಧ್ಯಕ್ಷ ಡ್ಯಾನಿಶ್ ಡಿಸೋಜ, ಸೇವಂತಿ ಗುಡ್ಡೆ ಮಸೀದಿ ಅಧ್ಯಕ್ಷ ಮುಹಮ್ಮದ್ ಶಮೀರ್,ಯು.ಕೆ. ಯೂನುಸ್ ಉಳ್ಳಾಲ್, ಸಮಾಜ ಸೇವಕ ರಾಝಿಕ್ ಉಳ್ಳಾಲ್, ಸಫರ್ ಸ್ಫೋರ್ಟ್ಸ್ ಕ್ಲಬ್ ಸದಸ್ಯ ಅಯ್ಯೂಬ್ ಮಂಚಿಲ, ನಗರಸಭಾ ಸದಸ್ಯರಾದ ಮೋನು ಮುಕ್ಕಚೇರಿ, ಮುಸ್ತಫಾ ಅಬ್ದುಲ್ಲಾ, ಅಶ್ರಫ್ ಬಾವಾ, ದ.ಕ. ಮತ್ತು ಉಡುಪಿ ಜಿಲ್ಲಾ ಸೆಂಟ್ರಲ್ ಕಮಿಟಿ ಸದಸ್ಯ ಸಲೀಂ ಉಳ್ಳಾಲ್ ಉಪಸ್ಥಿತರಿದ್ದರು.