×
Ad

ಪೃಥ್ವಿ-2 ಕ್ಷಿಪಣಿ ಪರೀಕ್ಷೆ ಯಶಸ್ವಿ

Update: 2016-02-16 23:33 IST

ಹೊಸದಿಲ್ಲಿ, ಫೆ.16: ಭಾರತವಿಂದು ಸ್ವದೇಶಿ ನಿರ್ಮಿತ ಪೃಥ್ವಿ-2 ಕ್ಷಿಪಣಿಯ ಪ್ರಾಯೋಗಿಕ ಹಾರಾಟ ನಡೆಸಿದೆ. 500 ಕಿ.ಗ್ರಾಂನಿಂದ 1,000 ಕಿ.ಗ್ರಾಂವರೆಗೆ ಸಿಡಿತಲೆಯನ್ನು ಒಯ್ಯಲು ಸಮರ್ಥವಾಗಿರುವ ಈ ಕ್ಷಿಪಣಿಯನ್ನು ಚಂಡಿಪುರದ ಪರೀಕ್ಷಾ ವಲಯದಿಂದ ಪ್ರಯೋಗಿಸಲಾಗಿದೆ.

ಸಮಗ್ರ ಪರೀಕ್ಷಾ ವಲಯದ 3ನೆ ಉಡಾವಣಾ ಸಂಕೀರ್ಣದಿಂದ ಸಂಚಾರಿ ಉಡಾವಕವೊಂದರಿಂದ ಮುಂಜಾನೆ 10ರ ವೇಳೆ ಕ್ಷಿಪಣಿಯನ್ನು ಹಾರಿಸಲಾಯಿತೆಂದು ರಕ್ಷಣಾ ಮೂಲಗಳು ತಿಳಿಸಿವೆ. 350 ಕಿ.ಮೀ. ವ್ಯಾಪ್ತಿ ಹೊಂದಿರುವ ನೆಲದಿಂದ ನೆಲಕ್ಕೆ ನೆಗೆಯುವ ಪೃಥ್ವಿ-2,500ರಿಂದ 1 ಸಾವಿರ ಕಿ.ಗ್ರಾಂ ಸಿಡಿತಲೆ ಒಯ್ಯಲು ಶಕ್ತವಾಗಿದ್ದು, ದ್ರವ ಇಂಧನದ ಅವಳಿ ಯಂತ್ರಗಳ ಮೂಲಕ ಚಲಿಸುತ್ತದೆ.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News