‘ಜಿಲ್ಲೆಯಲ್ಲಿ ಜಾಗ ನೀಡಿದರೆ ಟ್ರಕ್ ಟರ್ಮಿನಲ್ ನಿರ್ಮಾಣ’
ಸುಳ್ಯ, ಫೆ.16: ದ.ಕ. ಜಿಲ್ಲೆಯಲ್ಲಿ 50 ಎಕರೆ ಜಾಗ ನೀಡಿದರೆ ದೇವರಾಜ ಅರಸು ಟ್ರಕ್ ಟರ್ಮಿನಲ್ ನಿಗಮದ ವತಿಯಿಂದ ಸುಸಜ್ಜಿತ ಟ್ರಕ್ ಟರ್ಮಿನಲ್ ನಿರ್ಮಿಸಲಾಗುವುದು ಎಂದು ನಿಗಮದ ಅಧ್ಯಕ್ಷ್ಷ ಡಾ. ಪ್ರಕಾಶಂ ಹೇಳಿದರು.
ಸುಳ್ಯದಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು, ಈಗಾಗಲೇ ರಾಜ್ಯದ ಹಲವೆಡೆ ಟ್ರಕ್ ಟರ್ಮಿ ನಲ್‌ಗಳ ಸ್ಥಾಪನೆಯಾಗಿದೆ. ಹೊಸದಾಗಿ ನಿರ್ಮಾಣ ಮಾಡಲು ನಿಗಮದಲ್ಲಿ ಹಣವೂ ಇದೆ. ದ.ಕ.ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಸೂಚನೆ ನೀಡಲಾಗಿದೆ. ಟ್ರಕ್ ಟರ್ಮಿನಲ್ ಜೊತೆಗೆ ಚಾಲಕರಿಗೆ ಮನೆಗಳನ್ನು ನಿರ್ಮಾಣ ಮಾಡುವ ಕಾರ್ಯವೂ ನಡೆಯಲಿದೆ ಎಂದು ಹೇಳಿದರು. ಕಟ್ಟಡ ಕಾರ್ಮಿಕ ಮಂಡಳಿಯಲ್ಲಿ ಸುಮಾರು 3,500 ಕೋಟಿ ಹಣವಿದೆ.
ಎಲ್ಲ ಕಾರ್ಮಿಕರು ಮಂಡಳಿಯಲ್ಲಿ ಹೆಸರು ನೋಂದಾಯಿಸಿ ಪ್ರಯೋಜನ ಪಡೆಯಬೇಕು. ಖಾಸಗಿ ಚಾಲಕರಿಗೆ ವಿಮೆ ಯೋಜ ನೆಯೂ ಜಾರಿಯಲ್ಲಿದೆ ಎಂದವರು ಹೇಳಿದರು. ಎ.ಎಸ್.ಚಂದ್ರಲಿಂಗಂ, ಶಿವಕುಮಾರ್ ಕೌಡಿಚ್ಚಾರ್, ಕನಕರಾಜ್, ಬಾಲಸುಬ್ರಹ್ಮಣಂ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿದ್ದರು.