ಸುಪ್ರೀಮ್‌ ಕೋರ್ಟ್‌ ಹಾಲ್‌ನಲ್ಲಿ ವಂದೇ ಮಾತರಂ ಕೂಗಿದ ವಕೀಲ....

Update: 2016-02-17 07:47 GMT

ಹೊಸದಿಲ್ಲಿ, ಫೆ.17: ಪಟಿಯಾಲ ಹೌಸ್‌ ನ್ಯಾಯಾಲಯದ ಆವರಣದಲ್ಲಿ ನಡೆದ ದಾಂದಲೆ ಪ್ರಕರಣದ ಬಗ್ಗೆ ಇಂದು ಸುಪ್ರೀಮ್‌ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದ ವೇಳೆ ವಕೀಲರೊಬ್ಬರು ವಂದೇ ಮಾತರಂ ಘೋಷಣೆ ಕೂಗಿದ ಘಟನೆ ನಡೆಯಿತು.
ವಿಚಾರಣೆ ಆರಂಭಗೊಳ್ಳುತ್ತಿದ್ದಂತೆ ಕೋರ್ಟ್‌ಹಾಲ್‌ನಲ್ಲಿದ್ದ ವಕೀಲ ರಾಜೀವ್‌ ಯಾದವ್‌ ಎಂಬವರು "ವಂದೇ ಮಾತರಂ" ಕೂಗಿದರೆನ್ನಲಾಗಿದೆ. ಇದು ನ್ಯಾಯಮೂರ್ತಿ ಗಮನಕ್ಕೆ ಬಂತು. ನ್ಯಾಯಮೂರ್ತಿ ಈ ರೀತಿ ಘೋಷಣೆ ಕೂಗಿದವರು ಯಾರೆಂದು ಪ್ರಶ್ನಿಸುತ್ತಿದ್ದಂತೆ, ಅಲ್ಲಿದ್ದ ಭದ್ರತಾ ಸಿಬಂದಿಗಳು ಕೋರ್ಟ್‌ ಹಾಲ್‌ ನಲ್ಲಿ ವಂದೇ ಮಾತರಂ ಘೋಷಣೆ ಕೂಗಿದ ವಕೀಲನನ್ನು ವಶಕ್ಕೆ ತೆಗೆದುಕೊಂಡು ಹೊರಕ್ಕೆ ಕರೆದೊಯ್ದರು.
ಸ್ವಲ್ಪ ಹೊತ್ತಿನ ಬಳಿಕ ಕೋರ್ಟ್‌ ಹಾಲ್‌ ಪ್ರವೇಶಿಸಿದ ವಕೀಲ ರಾಜೀವ್‌ ಯಾದವ್‌ ತನ್ನ ತಪ್ಪಿಗೆ ನ್ಯಾಯಮೂರ್ತಿಗಳ ಮುಂದೆ ಕ್ಷಮೆ ಯಾಚಿಸಿದರು.. ನ್ಯಾಯಮೂರ್ತಿ  ಅವರು ವಕೀಲನಿಗೆ  ಎಚ್ಚರಿಕೆ ನೀಡಿ ಹೊರ ಕಳಿಸಿದರೆನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News