ಉಪ್ಪಳ :ಮದ್ರಸ ಅಧ್ಯಾಪಕನಿಂದ ವಿದ್ಯಾರ್ಥಿಗೆ ಹಲ್ಲೆ; ಆರೋಪ
Update: 2016-02-17 15:09 IST
ಮಂಜೇಶ್ವರ: ಮದ್ರಸ ಅಧ್ಯಾಪಕನೋರ್ವ ವಿದ್ಯಾರ್ಥಿಗೆ ಹಲ್ಲೆಗೈದಿದ್ದಾರೆ ಎನ್ನಲಾದ ಘಟನೆ ಉಪ್ಪಳದಿಂದ ವರದಿಯಾಗಿದೆ.
ಹೋಮ್ ವರ್ಕ್ ಮಾಡಿಲ್ಲ ಎಂಬ ಕಾರಣಕ್ಕೆ ಇಲ್ಲಿನ ಖಾಸಗಿ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಾಪಕ ವಿದ್ಯಾರ್ಥಿ ಗೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಗಾಯಗೊಂಡ 2 ನೇ ತರಗತಿ ವಿದ್ಯಾರ್ಥಿ ಉಪ್ಪಳ ಅಯ್ಯೂರಿನ ರಿಯಾಝ್ ಎಂಬವರ ಪುತ್ರ ರಯ್ಯಾನ್ (9) ನನ್ನು ಕುಂಬಳೆ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಚೈಲ್ಡ್ ಲೈನ್ ಗೆ ದೂರು ನೀಡಲಾಗಿದೆ.