ಮಂಗಳೂರು: ಸೋಲಾರ್ ಸಾಲಮೇಳ - 138 ಘಟಕಗಳ ಪ್ರಸ್ತಾವನೆ
Update: 2016-02-17 18:13 IST
ಮಂಗಳೂರು, ಫೆ, 17; ಬುಧವಾರ ನಗರದ ಪುರಭವನದಲ್ಲಿ ನಡೆದ ಸೋಲಾರ್ ಸಾಲ ಮೇಳದಲ್ಲಿ ಒಟ್ಟು 138 ಸೋಲಾರ್ ಘಟಕಗಳನ್ನು ಸ್ಥಾಪಿಸುವ ಪ್ರಸ್ತಾವನೆ ಸಾರ್ವಜನಿಕರಿಂದ ಸ್ವೀಕೃತವಾಗಿದೆ.
ಸೋಲಾರ್ ಸಾಲಮೇಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಬಂದು ಸೋಲಾರ್ ಅಳವಡಿಕೆಯ ಮಾಹಿತಿ ಪಡೆದುಕೊಂಡಿರುತ್ತಾರೆ. ಸುಮಾರು 456ಕ್ಕೂ ಅಧಿಕ ಮಂದಿ ಸೋಲಾರ್ ಕುರಿತು ವಿವರಣೆ ಕೇಳಿ ಪಡೆದಿರುತ್ತಾರೆ. ಈ ಪೈಕಿ 138 ಮಂದಿ ಸೋಲರ್ ಘಟಕಗಳ ಅಳವಡಿಕೆಗೆ ಆಸಕ್ತಿ ವ್ಯಕ್ತಪಡಿಸಿ, ಪ್ರಸ್ತಾವನೆ ಸಲ್ಲಿಸಿರುತ್ತಾರೆ. ಒಬ್ಬರಿಗೆ ಸ್ಥಳದಲ್ಲೇ ಸಾಲ ಮಂಜೂರು ಮಾಡಲಾಗಿದೆ.
ಇಂದಿನ ಸೋಲಾರ್ ಸಾಲಮೇಳದಿಂದ ಜಿಲ್ಲೆಯಲ್ಲಿ ಸೋಲಾರ್ ಸಾಮರ್ಥ್ಯವು 1.25 ಮೆಗಾವ್ಯಾಟ್ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ನಬಾರ್ಡ್ ಎಜಿಎಂ ಪ್ರಸಾದ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.