ಪುತ್ತೂರು : ನಿಲ್ಲಿಸಿದ್ದ ರಿಕ್ಷಾ ಕಳ್ಳತನ
Update: 2016-02-17 18:36 IST
ಪುತ್ತೂರು: ಮನೆಯ ಪಕ್ಕದಲ್ಲಿ ನಿಲ್ಲಿಸಲಾಗಿದ್ದ ರಿಕ್ಷಾವೊಂದು ಬೆಳಿಗ್ಗೆ ನೋಡುವಾಗು ನಾಪತ್ತೆಯಾಗಿದ್ದು, ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಗೆ ದೂರು ನೀಡಲಾಗಿದೆ. ಪುತ್ತೂರು ತಾಲೂಕಿನ ಬಲ್ನಾಡು ಗ್ರಾಮದ ಮುಗೆರೋಡಿ ನಿವಾಸಿ ಯತೀಶ್ ರೈ ಎಂಬವರು ತನ್ನ ಮನೆಯ ಪಕ್ಕದಲ್ಲಿನ ರಸ್ತೆ ಬದಿಯಲ್ಲಿ ತನ್ನ ರಿಕ್ಷಾವನ್ನು ನಿಲ್ಲಿಸಿದ್ದು, ಮಂಗಳವಾರ ರಾತ್ರಿ ನಿಲ್ಲಿಸಿದ್ದ ರಿಕ್ಷಾ ನಾಪತ್ತೆಯಾಗಿದೆ. ರಿಕ್ಷಾಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳೂ ರಿಕ್ಷಾದೊಳಗಡೆಯೇ ಇತ್ತು. ಬೆಳಿಗ್ಗೆ ನೋಡಿದಾಗ ರಿಕ್ಷ ಕಳ್ಳತನವಾಗಿರುವುದು ಬೆಳಕಿಗೆ ಬಂದಿತ್ತು. ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.