ಝಿಕಾ ವಿರುದ್ಧ ಹೋರಾಡಲು 383 ಕೋಟಿ ರೂ. ಅಗತ್ಯ

Update: 2016-02-17 15:49 GMT

ಜಿನೇವ, ಫೆ. 17: ಝಿಕಾ ವೈರಸ್ ವಿರುದ್ಧ ಹೋರಾಡಲು ಜೂನ್‌ವರೆಗೆ 56 ಮಿಲಿಯ ಡಾಲರ್ (ಸುಮಾರು 383 ಕೋಟಿ ರೂಪಾಯಿ) ಮೊತ್ತದ ಅಗತ್ಯವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಬುಧವಾರ ಹೇಳಿದೆ.

ರೋಗದ ಲಸಿಕೆಗಳು ಮತ್ತು ಚಿಕಿತ್ಸೆಗಳ ಶೀಘ್ರ ಸಂಶೋಧನೆಗೆ ನಿಧಿ ಒದಗಿಸುವುದು ಇದರಲ್ಲಿ ಸೇರಿದೆ.

 ಈ ಪೈಕಿ 25 ಮಿಲಿಯ ಡಾಲರ್ (ಸುಮಾರು 171 ಕೋಟಿ ರೂಪಾಯಿ) ಮೊತ್ತ ಸ್ವತಃ ವಿಶ್ವ ಆರೋಗ್ಯ ಸಂಸ್ಥೆಗೇ ಬೇಕಾಗಿದೆ.

ಸೊಳ್ಳೆಯಿಂದ ಹರಡುವ ರೋಗದ ನಿಯಂತ್ರಣಕ್ಕಾಗಿಯೂ ಈ ಮೊತ್ತವನ್ನು ಬಳಸಲಾಗುವುದು.

ರೋಗ ಈಗಾಗಲೇ 39 ದೇಶಗಳಿಗೆ ಹರಡಿದೆ. ರೋಗಪೀಡಿತ ಗರ್ಭಿಣಿಯರು ವಿಕೃತ ತಲೆಯ ಶಿಶುಗಳಿಗೆ ಜನ್ಮ ನೀಡುತ್ತಾರೆ ಎನ್ನುವುದು ಸಾಬೀತಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News