ಕುಂಬ್ರ : ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ನೆಮ್ಮದಿ ಜೀವನ ಕಾಣಲು ಸಾದ್ಯ- ಜನಾರ್ಧನ ಪೂಜಾರಿ
ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ನೆಮ್ಮದಿ ಜೀವನ ಕಾಣಲು ಸಾದ್ಯ- ಜನಾರ್ಧನ ಪೂಜಾರಿ
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಾತ್ರ ಇಲ್ಲಿನ ಬಡವರು , ಹಿಂದುಳಿದ ವರ್ಗದವರು , ಅಲ್ಪಸಂಖ್ಯಾತರು ನೆಮ್ಮದಿಯ ಜೀವನವನ್ನು ಕಾಣಲು ಸಾಧ್ಯವಾಗುತ್ತದೆ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ಬಿ. ಜನಾರ್ಧನ ಪೂಜಾರಿ ಹೇಳಿದರು.
ಅವರು ಕುಂಬ್ರದಲ್ಲಿ ಬುಧವಾರ ಸಂಜೆ ಜಿಪಂ ಹಾಗೂ ತಾಪಂ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರು. ಮಹಿಳೆಯರು ರಾಜಕೀಯದಲ್ಲಿ ಮುಂದೆ ಬರಬೇಕು ಮತ್ತು ಅಧಿಕಾರದಲ್ಲಿಯೂ ಇರಬೇಕು ಎಂಬ ಉದ್ದೆಶದಿಂದ ಮಹಿಳಾ ಮೀಸಲು ನೀಡಲಾಗಿದೆ. ಮಹಿಳೆಯರನ್ನು ಗೆಲ್ಲಿಸುವ ಮೂಲಕ ಮತದಾರರು ಅವರಿಗೂ ಅವಕಾಶ ನೀಡಬೇಕು. ಸ್ಥಳೀಯ ಕ್ಷೇತ್ರಗಳ ಅಭಿವೃದ್ದಿಯಾಗಬೇಕಿದೆ. ಅಭಿವೃದ್ದಿ ಮಾಡುವುದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಬಿಜೆಪಿ ಕೆಂದ್ರದಲ್ಲಿ ಆಡಳಿತ ನಡೆಸುತ್ತಿದ್ದು ಏನು ಅಭಿವೃದ್ದಿ ಕೆಲಸವನ್ನು ಮಾಡಿದೆ ಎಂದು ಪ್ರಶ್ನಿಸಿದರು.
ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಫಝಲ್ ರಹೀಂ , ಎನ್ ಸುಧಾಕರ ಶೆಟ್ಟಿ, ಯುವ ಕಾಂಗ್ರೆಸ್ ಮುಖಂಡ ರೋಶನ್ ರೈ ಬನ್ನೂರು ಸ್ಥಳೀಯ ಕಾಂಗ್ರೆಸ್ ಮುಖಂಡರಾದ ದುರ್ಗಾಪ್ರಸಾದ್ ರೈ ಕುಂಬ್ರ, ಶಶಿಕಿರಣ್ ರೈ, ಅಬ್ದುಲ್‌ರಹಿಮಾನ್ ಅರಿಯಡ್ಕ , ಮಹೇಶ್ ರೈ ಅಂಕೊತ್ತಿಮಾರ್ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪೂಜಾರಿಯವರು ಕುಂಬ್ರದಲ್ಲಿ ಸಾರ್ವಜನಿಕರಲ್ಲಿ ಮತ ಯಾಚನೆ ನಡೆಸಿದರು.