ಮಂಜೇಶ್ವರ : ನಾಪತ್ತೆಯಾಗಿದ್ದ ಮಹಿಳೆಯ ಮೃತದೇಹ ಕೆರೆಯಲ್ಲಿ ಪತ್ತೆ
Update: 2016-02-17 20:47 IST
ಮಂಜೇಶ್ವರ : ನಾಪತ್ತೆಯಾಗಿದ್ದ ಮಹಿಳೆಯ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ. ಕುಂಬಳೆ ಬಳಿಯ ಶಿರಿಯಾ ಸೀರೆ ಶ್ರೀ ಶಂಕರನಾರಾಯಣ ದೇವಸ್ಥಾನ ಸಮೀಪದ ನಿವಾಸಿ ಜಯರಾಮ ಕಾರಂತ ಅವರ ಪತ್ನಿ ಸುಕನ್ಯಾ (43) ಎಂಬವರೇ ಮೃತಪಟ್ಟ ಮಹಿಳೆ.
ಸೋಮವಾರ ಮಧ್ಯಾ ಹ್ನದಿಂದ ಸುಕನ್ಯಾ ನಾಪತ್ತೆಯಾಗಿದ್ದರು. ಈ ಬಗ್ಗೆ ಮನೆಯವರು ಹುಡುಕಾಡಿ ಪೊಲೀಸರಿಗೆ ದೂರು ನೀಡಿದ್ದರು. ಈ ವೇಳೆ ಮನೆಯಿಂದ ಸುಮಾರು 100 ಮೀಟರ್ ದೂರದಲ್ಲಿರುವ ಸಂಬಂಧಿ ಕರ ತೋಟದ ಕೆರೆಯಲ್ಲಿ ಮಂಗಳವಾರ ಮಧ್ಯಾಹ್ನ ಮೃತದೇಹ ಪತ್ತೆಯಾಗಿದೆ. ಅಗ್ನಿಶಾಮಕ ದಳ ತಲುಪಿ ಮೃತದೇಹವನ್ನು ಮೇಲಕ್ಕೆತ್ತಿದೆ.
ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಶವಮಹಜರು ನಡೆಸಿದ ಬಳಿಕ ಮಂಗಳವಾರ ರಾತ್ರಿ ಮನೆಗೆ ತಂದು ಅಂತ್ಯಸಂಸ್ಕಾರ ನಡೆಸಲಾಯಿತು. ಮೃತರು ಪತಿ, ಇಬ್ಬರು ಪುತ್ರಿಯರುಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.