ಉಪ್ಪಳ :ಮದ್ರಸಾ ಅಧ್ಯಾಪಕನಿಂದ ವಿದ್ಯಾರ್ಥಿ ಮೇಲೆ ಥಳಿತ : ವಿದ್ಯಾರ್ಥಿಗೆ ಗಾಯ
Update: 2016-02-17 20:51 IST
ಮಂಜೇಶ್ವರ: ಮದ್ರಸಾ ಅಧ್ಯಾಪಕನೋರ್ವ ವಿದ್ಯಾರ್ಥಿ ಮೇಲೆ ಹಲ್ಲೆಗೈದ ಘಟನೆ ಉಪ್ಪಳದಿಂದ ವರದಿಯಾಗಿದೆ. ಇಲ್ಲಿನ ಖಾಸಗಿ ಆಂಗ್ಲ ಮಾಧ್ಯಮ ಶಾಲೆಯಲ್ಲಿನ ಮದ್ರಸಾದಲ್ಲಿನ ಉಸ್ತಾದರೋರ್ವರು ವಿದ್ಯಾರ್ಥಿ ಮೇಲೆ ಚೆನ್ನಾಗಿ ಥಳಿಸಿದ ಘಟನೆ ವರದಿಯಾಗಿದೆ. ಹೋಮ್ ವರ್ಕ್ ಮಾಡಿಲ್ಲ ಯಾಕೆಂದು ಪ್ರಶ್ನಿಸಿ ವಿದ್ಯಾರ್ಥಿ ಮೇಲೆ ಥಳಿಸಿರುವುದಾಗಿ ಹೇಳಲಾಗಿದೆ. ಥಳಿತದಿಂದ ಗಾಯಗೊಂಡ 2 ನೇ ತರಗತಿ ವಿದ್ಯಾರ್ಥಿ ಉಪ್ಪಳ ಅಯ್ಯೂರಿನ ರಿಯಾರ್ ಎಂಬವರ ಪುತ್ರ ರಯ್ಯಾನ್ (09) ನನ್ನು ಕುಂಬಳೆ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚೈಲ್ಡ್ ಲೈನ್ ಗೆ ದೂರು ನೀಡಲಾಗಿದೆ.