×
Ad

ಬಾಲಕಿ ಮೇಲೆ ಅತ್ಯಾಚಾರ: ಆರೋಪಿ ಸೆರೆ

Update: 2016-02-17 21:53 IST

ಮಂಗಳೂರು, ಫೆ. 17: ಅಸ್ಸಾಂ ಮೂಲದ ಯುವಕನೋರ್ವ ಅಪ್ರಾಪ್ತೆಯ ಮೇಲೆ ಅತ್ಯಾಚಾರ ನಡೆಸಿದ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಸ್ಸಾಂ ಮೂಲದ ಮನೋಜ್ (26) ಎಂಬಾತ ಕಳೆದ ಕೆಲವು ಸಮಯದಿಂದ ಯೆಯ್ಯಾಡಿಯಲ್ಲಿ ಸಿಮೆಂಟ್ ಗೋಡೌನ್‌ವೊಂದರಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದ. ಇದೇ ಗೋಡೌನ್‌ನಲ್ಲಿ ದಂಪತಿಯೊಂದು ಕೆಲಸ ಮಾಡುತ್ತಿದ್ದಾರೆನ್ನಲಾಗಿದೆ. ಫೆಬ್ರವರಿ 12ರಂದು ಮನೋಜ್ ಈ ದಂಪತಿಯ ಅಪ್ರಾಪ್ತ ಪುತ್ರಿಯನ್ನು ಪುಸಲಾಯಿಸಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಫೆಬ್ರವರಿ 15ರಂದು ಬಾಲಕಿಯ ಹೆತ್ತವರು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಇಂದು ಆರೋಪಿಯನ್ನು ಬಂಧಿಸಿದ್ದಾರೆ.

ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News