×
Ad

ತೊಕ್ಕೊಟ್ಟು : ಸ್ಮಾರ್ಟ್ ಸಿಟಿ ವರ್ತಕರ ಸಂಘ ಅಸ್ತಿತ್ವಕ್ಕೆ

Update: 2016-02-17 22:34 IST

ಉಳ್ಳಾಲ. ಫೆ, 17: ಸ್ಮಾರ್ಟ್ ಸಿಟಿಇದರ ವರ್ತಕರ ಶ್ರೇಯಾಭಿವೃದ್ಧಿಗಾಗಿ ಎಲ್ಲಾ ವ್ಯಾಪಾರಸ್ಥರ ಸಹಮತದೊಂದಿಗೆ ಸ್ಮಾರ್ಟ್ ಸಿಟಿ ಟ್ರೇಡರ್ಸ್‌ ಅಸೋಸಿಯೇಶನ್ ಇತ್ತೀಚೆಗೆ ಉದ್ಘಾಟನೆಗೊಂಡಿತು.
  
 ಅಧ್ಯಕ್ಷರಾಗಿ ಅಹ್ಮದ್ ಹುಸೈನ್ (ಮಾಲಕರು ಜಿ.ಟ್ರಾವೆಲ್ಸ್), ಉಪಾಧ್ಯಕ್ಷರುಗಳಾಗಿ ಆನಂದ ಶೆಟ್ಟಿ (ಜೆ.ಎಸ್.ಅಸೋಸಿಯೇಟ್ಸ್) ಹಾಗೂ ನಾಸಿರ್ ಸಾಮಣಿಗೆ (ಆಶಿಕ್ ಡ್ರೆಸಸ್) ಪ್ರಧಾನ ಕಾರ್ಯದರ್ಶಿಯಾಗಿ ಝೈನುದ್ದೀನ್ ಯು.ಎಚ್ (ಸುರ್ನ ಡ್ರೆಸಸ್) ಜತೆ ಕಾರ್ಯದರ್ಶಿಗಳಾಗಿ ನಿಸಾರ್ ಅಹಮದ್ (ಐ.ಬಿ.ಕಲೆಕ್ಷನ್) ಹಾಗೂ ರಾಜೇಶ್ (ಪ್ರಿಂಜ್ ಮಾಕ್ಸ್) ಕೋಶಾಧಿಕಾರಿಯಾಗಿ ಹನೀಫ್ (ಕ್ಯೂ ಬೇಬಿ) ಕಾನೂನು ಸಲಹೆಗಾರರಾಗಿ ಅಡ್ವೆಕೇಟ್ ಪೈಝಲ್, ಪತ್ರಿಕಾ ಕಾರ್ಯದರ್ಶಿಗಳಾಗಿ ಶಕೀಲ್ ತುಂಬೆ (ತುಂಬೆಜಾ ಗ್ರಾಫಿಕ್ಸ್) ಹಾಗೂ ಖಲೀಲ್ (ವಿ-ಕ್ಲಬ್) ಅವಿರೋಧವಾಗಿ ಆಯ್ಕೆಯಾದರು. 29 ಜನರ ಕಾರ್ಯಕಾರಿ ಸಮಿತಿ ರಚಿಸಲಾಯಿತು. ಝೈನುದ್ದೀನ್ ಯು.ಎಚ್ ಕಾರ್ಯಕ್ರಮ ನಿರೂಪಿಸಿದರು. ಮುಝಮ್ಮಿಲ್‌ರವರು ಸ್ವಾಗತಿಸಿದರು. ನಾಸಿರ್ ಸಾಮಣಿಗೆ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News