×
Ad

ಬಡತನ ನಿರ್ಮೂಲನದ ಕಚೇರಿ ಉದ್ಘಾಟನೆ

Update: 2016-02-17 23:18 IST

ಮಂಗಳೂರು,ಫೆ.17: ಮಂಗಳೂರು ಮಹಾ ನಗರಪಾಲಿಕೆಯಲ್ಲಿ ನಗರ ಬಡತನ ನಿರ್ಮೂಲ ಕಚೇರಿಯನ್ನು ಮನಪಾ ಮೇಯರ್ ಜೆಸಿಂತಾ ವಿಜಯ ಆಲ್ಪ್ರೆಡ್ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಬಡತನ ನಿರ್ಮೂಲನ ಕಚೇರಿಗೆ ಬರುವ ಬಡವರಿಗೆ, ವಿಕಲಚೇತನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಕಚೇರಿ ತೆರೆಯಲಾಗಿದೆ ಎಂದರು.
ನಗರ ಬಡತನ ನಿರ್ಮೂಲನ ಕೋಶದಡಿಯಲ್ಲಿ ಮಂಜೂರಾದ 3,72,173 ರೂ. ವೌಲ್ಯದ ವಿವಿಧ ಸೌಲಭ್ಯಗಳನ್ನು ವಿತರಿಸಲಾಯಿತು.
ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್ ಮಾತನಾಡಿ, ನಗರವನ್ನು ಸೀಮೆಎಣ್ಣೆ ಮುಕ್ತ ನಗರವನ್ನಾಗಿಸುವ ನಿಟ್ಟಿನಲ್ಲಿ ಯೋಜನೆ ಹಮ್ಮಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಮಾ.7 ರಂದು ನಗರದ ಪುರಭವನದಲ್ಲಿ 1350 ಮಂದಿಗೆ ನೀಡುವ ವಿವಿಧ ಸೌಲಭ್ಯಗಳಲ್ಲಿ 700 ಮಂದಿಗೆ ಅಡುಗೆ ಅನಿಲದ ಸಂಪರ್ಕ ಸೌಲಭ್ಯ ವಿತರಿಸಲಾಗುವುದು ಎಂದರು.
    
ಮನಪಾ ಉಪಮೇಯರ್ ಪುರುಷೋತ್ತಮ ಚಿತ್ರಾಪುರ, ಮನಪಾ ವಿಪಕ್ಷ ನಾಯಕ ಸುಧೀರ್ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ದೀಪಕ್ ಪೂಜಾರಿ, ಸದಸ್ಯರಾದ ವಿಜಯ್ ಕುಮಾರ್ ಶೆಟ್ಟಿ, ರಜನೀಶ್, ರೂಪಾ ಡಿ.ಬಂಗೇರ , ಜಯಂತಿ ಆಚಾರ್ , ಸಬಿತಾ ಮಿಸ್ಕಿತ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News