×
Ad

ಕೊಲ್ಲೂರು ಹಳೆವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ

Update: 2016-02-17 23:29 IST

ಕಿನ್ನಿಗೋಳಿ, ಫೆ.17: ಯುವ ಜನಾಂಗ ಮಾದಕ ದ್ರವ್ಯ, ದುಶ್ಚಟಗಳನ್ನು ದೂರೀಕರಿಸಿ ಸಂಘಟನೆ ಮನೋಭಾವ ಬೆಳೆಸಿಕೊಂಡಾಗ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಮುಲ್ಕಿ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯ್ಕಿ ಹೇಳಿದರು. ಕೊಲ್ಲೂರು ಜಿಪಂ ಹಿ.ಪ್ರಾ. ಶಾಲಾ ವಠಾರದಲ್ಲಿ ನಡೆದ ಕೊಲ್ಲೂರು ಹಳೆ ವಿದ್ಯಾರ್ಥಿ ಸಂಘದ 32ನೆ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು. ಈ ಸಂದರ್ಭ ಕೊಲ್ಲೂರು ಸರಕಾರಿ ಶಾಲೆಯ ಮುಖ್ಯ ಶಿಕ್ಷಕಿ ಸುಧಾಸಿನಿ, ಐಕಳ ಪೊಂಪೈ ಕಾಲೇಜಿನ ಉಪನ್ಯಾಸಕಿ ಡಾ. ಫ್ರೀಡಾ ರೋಡ್ರಿಗಸ್, ದಾನಿ ರಮೇಶ್ ಉಳೆಪಾಡಿ ಹಾಗೂ ನಾಟಕ ರಚನೆಗಾರ ಉಮೇಶ್ ಕೊಲ್ಲೂರು ಅವರನ್ನು ಸನ್ಮಾನಿಸಲಾಯಿತು. ಹಳೆ ವಿದ್ಯಾರ್ಥಿ ಸಂಘದ ಸ್ಥಾಪಕ ಅಧ್ಯಕ್ಷ ಐತಪ್ಪಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಸರಕಾರಿ ಕಾಲೇಜು ಪ್ರಾಧ್ಯಾಪಕ ಸೇಸಪ್ಪಅಮೀನ್, ವಿಜಯ ಬ್ಯಾಂಕ್‌ನ ದಾಮಸ್‌ಕಟ್ಟೆ ಶಾಖಾ ಪ್ರಬಂಧಕ ಸಂತೋಷ್ ಕುಮಾರ್ ಉಪಸ್ಥಿತರಿದ್ದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮೈಕಲ್ ರೋಡ್ರಿಗಸ್ ಸ್ವಾಗತಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News