×
Ad

ಕಾರ್ಪ್ ಬ್ಯಾಂಕ್‌ನಲ್ಲಿ ಹಿಂದಿ ಕಾರ್ಯಾಗಾರ

Update: 2016-02-17 23:35 IST


 ಮಂಗಳೂರು, ಫೆ.17: ಸರಕಾರದ ರಾಜಭಾಷಾ ನೀತಿಯನ್ನು ಅನುಷ್ಠಾನಗೊಳಿಸುವ ಸಲುವಾಗಿ ಕಾರ್ಪೊರೇಶನ್ ಬ್ಯಾಂಕ್‌ನ ಮಂಗಳೂರು ಮತ್ತು ಉಡುಪಿ ವಲಯ ಕಚೇರಿಯ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆಗೆ ಒಂದು ದಿನದ ಅಡ್ವಾನ್ಸ್ಡ್ ಹಿಂದಿ ಕಾರ್ಯಾಗಾರವನ್ನು ಇತ್ತೀಚೆಗೆ ಏರ್ಪಡಿಸಲಾಯಿತು.
ಬ್ಯಾಂಕಿನ ಸಿಬ್ಬಂದಿ ತರಬೇತಿ ಮಹಾವಿದ್ಯಾಲಯದ ಪ್ರಾಂಶುಪಾಲ ಹಾಗೂ ಸಹಾಯಕ ಮಹಾ ಪ್ರಬಂಧಕ ಎಸ್.ಸಾತು ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
  ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆಯ ಸಹಾಯಕ ನಿರ್ದೇಶಕಿ ಅನುರಾಧ ಕೆ., ಬ್ಯಾಂಕಿನ ವರಿಷ್ಠ ಪ್ರಬಂಧಕರಾದ ಡಾ.ಸರಸ್ವತಿ, ಸುರೇಶ ಟಿ., ಕೆನರಾ ಕಾಲೇಜಿನ ಅಸೋಸಿಯೇಟ್ ಪ್ರೊಫೆಸರ್ ಡಾ.ಕಲ್ಪನಾ ಪ್ರಭು ಹಿಂದಿ ಭಾಷೆಗೆ ಸಂಬಂಧಿಸಿ ಮಾಹಿತಿಗಳನ್ನು ನೀಡಿದರು.
ಜಯಂತಿ ಪ್ರಭು ಪ್ರಾರ್ಥಿಸಿದರು. ಉಡುಪಿ ವಲಯ ಕಚೇರಿಯ ಸಹಾಯಕ ಪ್ರಬಂಧಕ ಶಂಕರ್ ಕಾಪಡಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News