ಸಬ್‌ಮರೀನ್ ಖರೀದಿ: ಆಸಿಸ್‌ಗೆ ಚೀನಾ ಆಕ್ಷೇಪ
ಬೀಜಿಂಗ್, ಫೆ. 17: ಜಪಾನ್‌ನಿಂದ ಸಬ್‌ಮರೀನ್‌ಗಳನ್ನು ಖರೀದಿಸಲು ಆಸ್ಟ್ರೇಲಿಯ ತೆಗೆದುಕೊಂಡಿರುವ ನಿರ್ಧಾರಕ್ಕೆ ಚೀನಾ ಆಕ್ಷೇಪ ವ್ಯಕ್ತಪಡಿಸಿದೆ. ಏಶ್ಯನ್ ದೇಶಗಳ ಭಾವನೆಗಳನ್ನು ಅರ್ಥಮಾಡಿಕೊಳ್ಳಬೇಕು ಎಂದು ಚೀನಾ ಆಸ್ಟ್ರೇಲಿಯವನ್ನು ಒತ್ತಾಯಿಸಿದೆ.
ಪ್ರಜ್ಞಾವಂತ ಅಮೆರಿಕನ್ನರು ಟ್ರಂಪ್‌ರನ್ನು ಆಯ್ಕೆ ಮಾಡುವುದಿಲ್ಲ: ಅಧ್ಯಕ್ಷ ಬರಾಕ್ ಒಬಾಮ ವಿಶ್ವಾಸ ಬಾಮರ್ಯಾಂಚೊ ಮಿರಾಜ್ (ಅಮೆರಿಕ), ಫೆ. 17: ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಆಕಾಂಕ್ಷಿ ಡೊನಾಲ್ಡ್ ಟ್ರಂಪ್ ಚುನಾವಣೆಯಲ್ಲಿ ಆಯ್ಕೆಯಾಗುವುದಿಲ್ಲ ಎಂಬ ವಿಶ್ವಾಸವನ್ನು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ವ್ಯಕ್ತಪಡಿಸಿದ್ದಾರೆ.
ಒಬಾಮ ತನ್ನ ಟೀಕೆಯನ್ನು ಬಿಲಿಯಾಧೀಶ ರಿಯಲ್ ಎಸ್ಟೇಟ್ ಕುಳ ಟ್ರಂಪ್‌ಗೆ ಮಾತ್ರ ಸೀಮಿತಪಡಿಸಲಿಲ್ಲ. ತನ್ನ ಸ್ಥಾನದಲ್ಲಿ ಅಧಿಕಾರಕ್ಕೆ ಬರುವ ರಿಪಬ್ಲಿಕನ್ ಪಕ್ಷದ ಎಲ್ಲ ಆಕಾಂಕ್ಷಿಗಳ ‘‘ಕಳವಳಕರ’’ ಹೇಳಿಕೆಗಳ ವಿರುದ್ಧ ಹರಿಹಾಯ್ದರು.
ಆದರೆ, ಟ್ರಂಪ್‌ರನ್ನು ಮಾತ್ರ ಒಬಾಮ ಕಟು ಮಾತುಗಳಲ್ಲಿ ಖಂಡಿಸಿದರು. ಅಮೆರಿಕದ ಜನರು ಟ್ರಂಪ್‌ರನ್ನು ಆಯ್ಕೆ ಮಾಡುತ್ತಾರೆ ಎಂದು ಯಾಕೆ ತಾನು ನಂಬುವುದಿಲ್ಲ ಎಂಬ ಬಗ್ಗೆ ತನ್ನದೇ ವಿವರಣೆಯನ್ನು ಒಬಾಮ ನೀಡಿದರು.
‘‘ಟ್ರಂಪ್ ಅಧ್ಯಕ್ಷರಾಗುವುದಿಲ್ಲ ಎಂದ ದೃಢ ವಿಶ್ವಾಸ ನನಗೆ ಈಗಲೂ ಇದೆ. ಯಾಕೆಂದರೆ, ನನಗೆ ಅಮೆರಿಕದ ಜನತೆಯ ಮೇಲೆ ಭಾರೀ ವಿಶ್ವಾಸವಿದೆ. ಅಧ್ಯಕ್ಷರಾಗುವುದೆಂದರೆ ಗಂಭೀರವಾದ ಕೆಲಸ ಎನ್ನುವುದನ್ನು ಜನರು ಅರ್ಥಮಾಡಿಕೊಳ್ಳುತ್ತಾರೆ ಎಂದು ನಾನು ಭಾವಿಸುವೆ’’ ಎಂದು ಕ್ಯಾಲಿಫೋರ್ನಿಯದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನುಡಿದರು.
‘‘ಅಧ್ಯಕ್ಷ ಪದವಿಯು ಯಾವುದೇ ಟಿವಿ ಕಾರ್ಯಕ್ರಮ ಅಥವಾ ರಿಯಲಿಟಿ ಶೋವನ್ನು ಏರ್ಪಡಿಸುವುದಿಲ್ಲ. ಅಧ್ಯಕ್ಷನಾಗುವುದೆಂದರೆ ಭಡ್ತಿ ಪಡೆಯುವುದಲ್ಲ. ಅದು ವಸ್ತುಗಳಿಗೆ ಮಾರುಕಟ್ಟೆ ಹುಡುಕುವುದೂ ಅಲ್ಲ. ಅದು ಕಠಿಣವಾದ ಕೆಲಸ’’ ಎಂದು ಆಗ್ನೇಯ ಏಶ್ಯದ 10 ದೇಶಗಳ ಸಂಘಟನೆ ಆಸಿಯಾನ್‌ನ ನೇಪಥ್ಯದಲ್ಲಿ ಸುದ್ದಿಗಾರರಿಗೆ ಹೇಳಿದರು.
ಅಮೆರಿಕದ ಜನರು ಸಂವೇದನಾಶೀಲರಾಗಿದ್ದಾರೆ. ಹಾಗೂ ಅಂತಿಮವಾಗಿ ಅವರು ವಿವೇಚನಾಯುತ ನಿರ್ಧಾರವೊಂದನ್ನು ತೆಗೆದುಕೊಳ್ಳಲಿದ್ದಾರೆ.