×
Ad

ಐಡಿಯಲ್ ಐಸ್ ಕ್ರೀಂ: ರಾಷ್ಟ್ರೀಯ ಪ್ರಶಸ್ತಿಗಳ ಗರಿ

Update: 2016-02-19 15:04 IST

 ಮಂಗಳೂರು: ಶ್ರೀ ಮುಕುಂದ್ ಕಾಮತ್‌ ಅವರ ನೇತೃತ್ವದ ಮಂಗಳೂರಿನ ಐಡಿಯಲ್ ಐಸ್ ಕ್ರೀಂ, ಗ್ರೇಟ್ ಇಂಡಿಯನ್ ಐಸ್ ಕ್ರೀಂ ಕಾಂಟೆಸ್ಟ್ ಸೀಝನ್ 5ರಲ್ಲಿ ತನ್ನ ಮೂರು ಅತ್ಯುತ್ತಮ ಫ್ಲೇವರ್‌ಗಳಿಗೆ ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. 

ಫೆಬ್ರವರಿ 11 ರಂದು ಗುರ್ಗಾಂವ್‌ನ ಡಬಲ್ ಟ್ರೀ ಬೈ ಹಿಲ್ಡನ್ ಹೊಟೇಲ್‌ನಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

ಈ ಸ್ಪರ್ಧೆಯಲ್ಲಿ 94ಕ್ಕೂ ಹೆಚ್ಚಿನ ಕಂಪೆನಿಗಳು ಭಾಗವಹಿಸಿದ್ದವು ಹಾಗೂ 500ಕ್ಕೂ ಹೆಚ್ಚಿನ ಬಗೆಯ ವೈವಿಧ್ಯಮಯ ಐಸ್ ಸ್ಕ್ರೀಂಗಳು ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದವು. ಈ ಸ್ಪರ್ಧೆಗಳಲ್ಲಿ ಐಡಿಯಲ್ ಐಸ್ ಕ್ರೀಂ ವೆನಿಲ್ಲಾ, ಚಾಕೋಲೆಟ್ ಹಾಗೂ ಮೋಸ್ಟ್ ಇನ್ನೋವೇಟಿವ್ ಎಂಬ 3 ವಿಭಾಗಗಳಲ್ಲಿ ಸ್ಪರ್ಧಿಸಿತ್ತು.

ಐಡಿಯಲ್ ಐಸ್ ಕ್ರೀಂ  ಮೂರು ಪ್ರಮುಖ ಪ್ರಶಸ್ತಿಗಳನ್ನು ಪಡೆದುಕೊಂಡಿತು.
     
 - ಸ್ವಿಸ್ ಚಾಕೋಲೆಟ್- ಭಾರತದ ಅತ್ಯುತ್ತಮ ಚಾಕೋಲೆಟ್ ಐಸ್ ಕ್ರೀಂ ಪ್ರಶಸ್ತಿ ಹಾಗೂ ಚಾಕೋಲೆಟ್ ವಿಭಾಗದಲ್ಲಿ ಚಿನ್ನದ ಪದಕ.


- ಕ್ರೀಮಿ ವೆನಿಲ್ಲಾ- ವೆನಿಲ್ಲಾ ವಿಭಾಗದಲ್ಲಿ ಚಿನ್ನದ ಪದಕ.


- ಚಾಕೋ ಚಿಲ್ಲಿ- ಮೋಸ್ಟ್ ಇನ್ನೋವೇಟಿವ್ ವಿಭಾಗದಲ್ಲಿ ಕಂಚಿನ ಪದಕ.

ಇದು ವಿಶ್ವದ ಅತೀ ದೊಡ್ಡ ಐಸ್ ಕ್ರೀಂ ಸ್ಪರ್ಧೆಯಾಗಿದ್ದು ಐಸ್ ಕ್ರೀಂನಲ್ಲಿ ಪರಿಣತರಾದ ಪ್ರಖ್ಯಾತ ವಾಸ್ಕೊ ಡಿ ಸೋಜಾ ತೀರ್ಪುಗಾರರಾಗಿ ಆಗಮಿಸಿದ್ದರು ಹಾಗೂ ಮಾಸ್ಟರ್ ಶೆಫ್ ಕುನಾಲ್ ಕಪೂರ್‌ರವರು ಮುಖ್ಯಾತಿಥಿಗಳಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News