ಶಾಲಾ- ಕಾಲೇಜುಗಳು ಬಂದ್, ಆರ್ಥಿಕ ಹಿಂದುಳಿದವರ ಪಟ್ಟಿಗೆ ಸೇರಲು ಜಾಟರಿಂದ ನಕಾರ!
ರೋಹಟಕ್: ಹರ್ಯಾಣದಲ್ಲಿ ಜಾಟರ ಮೀಸಲಾತಿ ಆಂದೋಲನತೀವ್ರಸ್ವರೂಪಕ್ಕೆ ಹೊರಳಿದ್ದು ಹರಿಯಾಣ ಸರಕಾರ ಮೊಬೈಲ್‌ಹಾಗೂ ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಿದೆ. ಗುರುವಾರ ಮೀಸಲಾತಿ ಕುರಿತು ಜಾರು ಭಾರೀ ಗದ್ದಲ ಎಬ್ಬಿಸಿದರು. ಕಾನೂನು ವ್ಯವಸ್ಥೆಯನ್ನು ಸುಗಮಗೊಳಿಸಲಿಕ್ಕಾಗಿ ಪೊಲೀಸರು 144 ಕಲಂ ಜಾರಿಗೊಳಿಸಿದ್ದಾರೆ. ರೋಹಟಕ್ ಮತ್ತು ಝಜ್ಜಾರ್‌ನಲ್ಲಿ ಶಾಲೆ ಕಾಲೇಜುಗಳನ್ನು ಫೆ.22ರ ವರೆಗೆ ಬಂದ್ ಮಾಡಲು ಆಜ್ಞೆ ಹೊರಡಿಸಲಾಗಿದೆ. ಆಂದೋಲನಾಕಾರರು ಹಲವು ವಾಹನಗಳನ್ನು ಸುಟ್ಟು ಹಾಕಿದ್ದಾರೆ, ಅಂಗಡಿಮುಂಗಟ್ಟುಗಳಿಗೆ ಹಾನಿಎಸೆಗಿದ್ದಾರೆ.
ಪೊಲೀಸರು ಮತ್ತು ಅರೆಸೇನಾ ಪಡೆ ಆಂದೋಲನಾಕಾರಿಗಳನ್ನು ಚದುರಿಸಲಿಕ್ಕಾಗಿ ಆಶ್ರುವಾಯು ಪ್ರಯೋಗ ಹಾಗೂ ಲಾಟಿಚಾರ್ಜ್ ನಡೆಸುತಿದ್ದರೂ ಪ್ರತಿಭಟನಾಕಾರರು ರಾಜ್ಯದ ಅನೇಕ ಕಡೆಗಳಲ್ಲಿ ರಸ್ತೆ ಬಂದ್ ಮಾಡಿ ವಿಜೃಂಭಿಸಿದ್ದಾರೆ. ಆಂದೋಲನದ ಕೇಂದ್ರಸ್ಥಳವಾದ ರೋಹಟಕ್ ಝಜ್ಜಾರ್ ಕ್ಷೇತ್ರದಲ್ಲಿ ರೈಲು ಹಾಗೂ ರಸ್ತೆ ಪ್ರಯಾಣಕ್ಕೆ ಹೆಚ್ಚಿನ ತಡೆಯೊಡ್ಡಲಾಗಿದೆ. ಭಿವಾನಿ, ಸೋನಿಪತ್, ಹಿಸ್ಸಾರ್‌ಗಳಲ್ಲಿ ಹೋರಾಟಗಾರರಿಂದಾಗಿ ವ್ಯಾಪಕ ತೊಂದರೆಯುಂಟಾಗಿದೆ. ಮುಖ್ಯಮಂತ್ರಿ ಮನೋಹರ್‌ಲಾಲ್‌ಕಟ್ಟರ್ ಮುಂದಿಟ್ಟ ಆರ್ಥಿಕ ಹಿಂದುಳಿದವರ ಕೋಟಾದಲ್ಲಿ ಸೇರಿಸುವ ಪ್ರಸ್ತಾವವನ್ನು ಜಾಟ್‌ನಾಯಕರು ತಳ್ಳಿಹಾಕಿದ್ದಾರೆ. ಹರ್ಯಾಣ ಸರಕಾರ ಕೇಂದ್ರದಿಂದ ಹೆಚ್ಚುವರಿ ಪ್ಯಾರಾ ಮಿಲಿಟಿರಿ ಪಡೆಗಳಿಗೆ ಮನವಿ ಮಾಡಿಕೊಂಡಿದೆ. ಈ ನಡುವೆ ಹೋರಾಟಕ್ಕೆ ದುಮುಕಿದ ವಿದ್ಯಾರ್ಥಿಗಳನ್ನು ಪೊಲೀಸರು ಅಟ್ಟಾಡಿಸಿ ಹೊಡೆದಿದದ್ದು ರಸ್ತೆ ತಡೆಯನ್ನು ತೆರವು ಗೊಳಿಸುತ್ತಿದ್ದರು. ಪೊಲೀಸರು ಬೇರೆಡೆಗೆ ಹೊರಟೊಡನೆ ಅವರು ಮತ್ತೆ ರಸ್ತೆ ತಡೆಯನ್ನು ಒಡ್ಡುತ್ತಿದ್ದರು.