ಕಿನ್ನಿಗೋಳಿ: ಪೆಬ್ರವರಿ 22 ಮತ್ತು 23 ರಂದು ವಾರ್ಷಿಕ ನೇಮೋತ್ಸವ
Update: 2016-02-19 16:50 IST
ಕಿನ್ನಿಗೋಳಿ, ಫೆ.19: ಶ್ರೀ ಕೋಡ್ದಬ್ಬು ದೈವಸ್ಥಾನ ಪಂಜ, ಇಲ್ಲಿನ ಸಪರಿವಾರ ಶ್ರೀ ಕೋಡ್ದಬ್ಬು ದೈವದ ವಾರ್ಷಿಕ ನೇಮೋತ್ಸವ ಪೆಬ್ರವರಿ 22 ಮತ್ತು 23 ರಂದು ನಡೆಯಲಿದ್ದು 22 ರಂದು ಸಂಜೆ 7.30 ಕ್ಕೆ ಭಂಡಾರ ಹೊರಟು ರಾತ್ರಿ 8.30ರಿಂದ ಅನ್ನಸಂತರ್ಪಣೆ ನಂತರ ಕೋಡ್ದಬ್ಬು ದೈವಸ್ಥಾನದ ನೇಮೋತ್ಸವ ನಡೆಯಲಿದೆ 23 ರಂದು ಧೂಮವತಿ ಬಂಟ ದೈವಗಳ ನೇಮೋತ್ಸವ ನಂತರ ಪ್ರಸಾದ ವಿತರಣೆ ನಡೆಯಲಿದೆ. ಎಂದು ದೈವಸ್ಥಾನದ ಆಡಳಿತ ಮಂಡಳಿ ಪ್ರಕಟನೆ ತಿಳಿಸಿದೆ.