ಜೆಎನ್‌ಯುಗೆ ಆರೆಸ್ಸೆಸ್ ಮುಖಂಡರ ಹೆಸರಿಡಿ - ಹಿಂದೂ ಮಹಾಸಭಾ
ಹೊಸದಿಲ್ಲಿ: ಜವಾಹರಲಾಲ್ ನೆಹರೂ ಯುನಿವರ್ಸಿಟಿಯಲ್ಲಿ ಈಗ ನಡೆಯುತ್ತಿರುವ ವಿವಾದದ ಲಾಭವೆತ್ತಲು ಗೋಡ್ಸೆ ಅನುಸ್ಮರಣೆ ಏರ್ಪಡಿಸಿದ ಹಿಂದೂ ಮಹಾಸಭಾ ರಂಗಪ್ರವೇಶಿಸಿದೆ. ವಿಶ್ವವಿದ್ಯಾನಿಲಯದ ಹೆಸರನ್ನು ಬದಲಿಸಿ ಆರೆಸ್ಸೆಸ್ ಸ್ಥಾಪಕರಾದ ಸಾವರ್‌ಕರ್ ಅಥವಾ ಹೆಗ್ಗಡೆವಾರ್‌ರ ಹೆಸರು ಇರಿಸಬೇಕೆಂದು ಅದು ಆಗ್ರಹಿಸಿದೆ.
ಹೀಗೊಂದು ಆಗ್ರಹದೊಂದಿಗೆ ಹಿಂದೂ ಮಹಾಸಭಾ ಪ್ರಧಾನಿ ಮೋದಿಗೆ ಪತ್ರಬರೆದಿದೆ. ಸುಮಾರು ಹದಿನೈದು ಮಂದಿ ಬಿಜೆಪಿ ಎಂಪಿಗಳು ಸಹಿಹಾಕಿರುವ ಮನವಿಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತುಸಚಿವೆ ಸ್ಮೃತಿ ಇರಾನಿಗೆ ಅದು ನೀಡಿದೆ.
ಇವೆಲ್ಲದ್ದರ ನಡುವೆ ಜೆಎನ್‌ಯುವನ್ನು ಮುಚ್ಚಬೇಕೆಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಆಗ್ರಹಿಸಿದ್ದಾರೆ. ಜೆಎನ್‌ಯುವನ್ನು ನಾಲ್ಕುತಿಂಗಳ ಕಾಲ ಮುಚ್ಚಬೇಕು. ದೇಶದ್ರೋಹ ಚಟುವಟಿಕೆನಡೆಸುವುದಿಲ್ಲ ಎಂದು ವಿದ್ಯಾರ್ಥಿಗಳಿಂದ ಅಫಿದಾವಿತ್‌ಗೆ ಸಹಿಹಾಕಿಸಿ ಪಡೆದುಕೊಂಡ ನಂತರ ಅದನ್ನು ತೆರೆದರೆ ಸಾಕೆಂದು ಸ್ವಾಮಿ ಹೇಳುತ್ತಿದ್ದಾರೆ.
ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯ ದೇಶದ್ರೋಹದ ಕೇಂದ್ರವಾಗಿದೆ, ಅದನ್ನು ಮುಚ್ಚಬೇಕೆಂದು ಸಂಘಪರಿವಾರ ಬಲಿಷ್ಠ ಪ್ರಚಾರ ನಡೆಸುತ್ತಿದೆ. ಹಿಂದೂ ಮಹಾಸಭಾ ಇದರಿಂದ ಲಾಭವೆತ್ತಲು ಮುಂದಾಗಿದ್ದು ಜೆಎನ್‌ಯು ಹೆಸರನ್ನೇ ಬದಲಾಯಿಸಬೇಕೆಂದು ಆಗ್ರಹಿಸಲು ಹೊರಟಿದೆ. ಜೆಎನ್‌ಯು ವಿದ್ಯಾರ್ಥಿ ಸಂಘ ಈ ಹಿಂದೆ ಹೈದರಾಬಾದ್ ಯುನಿವರ್ಸಿಟಿಯ ವಿದ್ಯಾರ್ಥಿ ರೋಹಿತ್‌ವೇಮುಲಾರ ಆತ್ಮಹತ್ಯೆಗೆ ಸಂಬಂಧಿಸಿ ನಡೆಸಿದ್ದ ಪ್ರತಿಭಟನೆ ಸಂಘಪರಿವಾರಿಗಳನ್ನು ಕೆರಳಿಸಿದೆ.