×
Ad

ಸುಳ್ಯ: ಮತ್ತೆ ಒಂಟಿ ಸಲಗದ ಭೀತಿ

Update: 2016-02-19 17:44 IST

ಸುಳ್ಯ: ಕಳೆದ ಕೆಲವು ವರ್ಷಗಳಿಂದ ವರ್ಷಕ್ಕೊಂದು ಬಾರಿ ಕಾಡು ಬಿಟ್ಟು ನಾಡಿಗೆ ಬರುತ್ತಿದ್ದ ಒಂಟಿ ಸಲಗ ಈ ಬಾರಿಯೂ ತಾಲ್ಲೂಕಿನ ಹಲವೆಡೆ ಕಾಣಿಸಿಕೊಂಡು ಜನರಲ್ಲಿ ಭೀತಿ ಸೃಷ್ಠಿ ಮಾಡಿತು.
 
2015ರ ಡಿ.31ರಂದು ಎಡಮಂಗಲದ ಪುಳಿಕುಕ್ಕುವಿನಲ್ಲಿ ಕಂಡು ಬಂದ ಈ ಆನೆ ಅಂದು ರಾತ್ರಿ ಪಂಜ ದಾಟಿ ಬಂಟಮಲೆಗೆ ಬಂದು ಎಲಿಮಲೆ, ದೇವಚಳ್ಳ, ದೊಡ್ಡತೋಟ, ಕಂದಡ್ಕ ಮೂಲಕ ಉಬರಡ್ಕಕ್ಕೆ ಬಂದು ಅಲ್ಲಿಂದ ಸೂಂತೋಡು ಮೂಲಕ ಪೆರಾಜೆ ಕಡೆಯಿಂದ ಭಾಗಮಂಡಲದತ್ತ ಪಯಣ ಬೆಳೆಸಿತ್ತು. ಆದರೆ ಇದೀಗ ಭಾಗಮಂಡಲದಿಂದ ಕೋಳಿಕಮಲೆ ಮೂಲಕ ಹೋದ ದಾರಿಯಲ್ಲೆ ಪೆರಾಜೆ ವರೆಗೆ ಬಂದು ತಲುಪಿದೆ ಎಂದು ತಿಳಿದು ಬಂದಿದೆ. ನಾಡಿಗೆ ಬಂದ ಒಂಟಿ ಸಲಗ ಪೆರಾಜೆ ಕುಂಡಾಡು ಪರಿಸರವಾಸಿಗಳಲ್ಲಿ ಭೀತಿ ಸೃಷ್ಠಿಸಿದ್ದು, ಅವರು ಪಟಾಕಿಗಳನ್ನು ಸಿಡಿಸಿ ಆನೆ ಓಡಿಸಲು ಮುಂದಾದ ಘಟನೆಯೂ ನಡೆಯುತ್ತಿದೆ. ಈ ಒಂಟಿ ಸಲಗ ಕಳೆದ ಕೆಲವು ವರ್ಷಗಳಿಂದ ವರ್ಷಕ್ಕೊಂದು ಬಾರಿ ಈ ಮಾರ್ಗದಲ್ಲಿ ಸಂಚಾರ ನಡೆಸುತ್ತಿದೆ. ಎಡಮಂಗಲ, ಪುಳಿಕುಕ್ಕು, ಪಂಜ, ಬಂಟಮಲೆ, ಉಬರಡ್ಕ, ಪೂಮಲೆ, ಪೆರಾಜೆ ಮಾರ್ಗವಾಗಿ ಭಾಗಮಂಡಲ ಕಡೆಗೆ ಹೋಗಿ ಹಿಂತಿರುಗಿ ಅದೇ ದಾರಿಯಲ್ಲಿ ಆನೆ ವಾಪಾಸು ಆಗುವ ಘಟನೆ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News