×
Ad

ಟಾಟಾ ಕ್ವಿಜ್: ಎನ್‌ಐಟಿಕೆ ಪ್ರಥಮ

Update: 2016-02-19 17:54 IST

ಮಂಗಳೂರು: ಮಣಿಪಾಲದಲ್ಲಿ ನಡೆದ ಟಾಟಾ ಕ್ರುಸಿಬಲ್ ಕ್ಯಾಂಪಸ್ ಕ್ವಿಜ್ ಸ್ಪರ್ಧೆಯಲ್ಲಿ ಸುರತ್ಕಲ್ ಎನ್‌ಐಟಿಕೆಯ ಪುಷ್ಕರ್ ಕುಲಕರ್ಣಿ ಹಾಗೂ ಜೆ. ಮಿಂಟು ಪ್ರಥಮ ಸ್ಥಾನ ಗಳಿಸಿ, ದಕ್ಷಿಣ ವಲಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಗುರುವಾರ ನಡೆದ ಸ್ಥಳೀಯ ವಿಭಾಗದ ಫೈನಲ್ಸ್‌ನಲ್ಲಿ ಮಣಿಪಾಲದ ಟ್ಯಾಪ್ಮಿಯ ಅನಿರುದ್ಧ್ ಮತ್ತು ಆದಿತ್ಯ ದ್ವಿತೀಯ ಸ್ಥಾನ ಪಡೆದರು.

ಮಣಿಪಾಲದ ಟಿ.ಎ.ಪೈ.ಮ್ಯಾನೇಜ್‌ಮೆಂಟ್ ಕಾಲೇಜಿನಲ್ಲಿ ನಡೆದ 12ನೇ ವರ್ಷದ ಸ್ಪರ್ಧೆಯ ವಿಜೇತ ತಂಡ, ದಕ್ಷಿಣ ವಲಯದಿಂದ ಆಯ್ಕೆಯಾದ ಎಂಟು ತಂಡಗಳ ಜತೆ ಸೇರಿದೆ.

ಸ್ಪರ್ಧಿಗಳ ಚಿಂತನೆಯ ವೇಗವನ್ನು ಪರೀಕ್ಷಿಸಲು ಈ ಬಾರಿ 20-20 ಮಾದರಿಯನ್ನು ಅಳವಡಿಸಲಾಗಿದ್ದು, ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಟ್ಯಾಪ್ಮಿ ನಿರ್ದೇಶಕ ಡಾ.ಆರ್.ಸಿ.ನಟರಾಜನ್ ವಿಜೇತ ತಂಡಕ್ಕೆ 75,000 ರೂ. ನಗದು ಬಹುಮಾನ ವಿತರಿಸಿದರು. ರನ್ನರ್ ಅಪ್ ತಂಡಕ್ಕೆ 35,000 ರೂ. ಬಹುಮಾನ ನೀಡಲಾಯಿತು.

ಅಂತಿಮ ಸುತ್ತಿಗೆ 6 ತಂಡಗಳನ್ನು ಆಯ್ಕೆ ಮಾಡಲಾಯಿತು. ಅಂತಿಮ ಸುತ್ತಿನಲ್ಲಿ ವಿಜೇತ, ರನ್ನರ್ ಅಪ್ ತಂಡಗಳೊಂದಿಗೆ ಸೆಣೆಸಾಟ ನಡೆಸಿದ ಇತರ ತಂಡಗಳೆಂದರೆ ಎಎಂಐಟಿ ಸೆಂಟ್ ಅಲೋಶಿಯಸ್‌ನ ಜಿತಿನ್ ಮತ್ತು ಜೈನ್ ಜೋಸ್, ಟ್ಯಾಪ್ಮಿಯ ತನುಜ್ ಗುಪ್ತ ಮತ್ತು ದುರ್ಗೆಶ್ ದೇಸಾಯಿ, ಐಸಿಎಐನ ವೈಷ್ಣವಿ ಕಾಮತ್ ಮತ್ತು ಭರತ್ ನಾಯಕ್, ಟ್ಯಾಪ್ಮಿಯ ವಿನಾಯಕ ಪ್ರಭು ಮತ್ತು ಸುದರ್ಶನ್ ನಿಧಿ.

ರಾಷ್ಟ್ರೀಯ ವಿಜೇತರು ಐದು ಲಕ್ಷ ರೂಪಾಯಿ ಹಾಗೂ ಟಾಟಾ ಕ್ರುಸಿಬಲ್ ಟ್ರೋಫಿ ಪಡೆಯಲಿದ್ದಾರೆ. ಕ್ವಿಜ್ ಕಾರ್ಯಕ್ರಮವನ್ನು ಎ.ಕೆ.ಎ ಪಿಕ್‌ಬ್ರೈನ್ ಹೆಸರಾಂತ ಕ್ವಿಜ್ ಮಾಸ್ಟರ್ ಗಿರಿ ಬಾಲಸುಬ್ರಮಣ್ಯಂ ನಡೆಸಿಕೊಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News