×
Ad

ಡೆಹ್ರಾಡೂನ್‌ನಲ್ಲಿ ಸ್ಕೂಲ್ ಯುನಿಫಾರ್ಮ್ ಧರಿಸಿ ಬಂದವರಿಗೆ ಸಿನೆಮಾ ಟಿಕೆಟ್ ಇಲ್ಲ

Update: 2016-02-19 18:47 IST

  ಡೆಹ್ರಾಡೂನ್: ರಾಜಧಾನಿಯ ಸಿನೆಮಾ ಗ್ರಹಗಳು ಶಾಲಾ ಸಮವಸ್ತ್ರದಲ್ಲಿ ಬರುವ ವಿದ್ಯಾರ್ಥಿಗಳನ್ನು ಇನ್ನು ಒಳಗೆ ಬಿಡುವುದಿಲ್ಲ. ಆರ್ಯನ್ ಚಾತ್ರ್ ಸಂಘಟನ್(ಆರ್ಯನ್ ವಿದ್ಯಾರ್ಥಿ ಸಂಘಟನೆ) ಈ ಕುರಿತು ಡಿಎಮ್ ಗಮನಕ್ಕೆ ತಂದಿತ್ತು. ಮನೋರಂಜನಾ ಅಧಿಕಾರಿಗೆ ಅವರು ಈ ಆದೇಶವನ್ನು ನೀಡಿದ್ದಾರೆ. ವಿದ್ಯಾರ್ಥಿಗಳನ್ನು ಮಾದಕವಸ್ತು ಮುಕ್ತಗೊಳಿಸಲು ಒಂದು ಹೆಲ್ಫ್ ಲೈನನ್ನು ಸ್ಥಾಪಿಸಲಿಕ್ಕೂ ಆದೇಶ ನೀಡಿದ್ದಾರೆ. ಬುಧವಾರ ಡಿಎವಿ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಸಚಿನ್ ತಪಾಲಿಯ ನೇತೃತ್ವದಲ್ಲಿ ವಿದ್ಯಾರ್ಥಿಗಳ ತಂಡ ಡಿಎಮ್‌ಗೆ ದೂರು ನೀಡಿ ವಿದ್ಯಾರ್ಥಿಗಳು ಕ್ಲಾಸ್‌ನ ಸಮಯದಲ್ಲಿ ಸಿನೆಮಾ ಗೃಹಗಳಲ್ಲಿರುತ್ತಾರೆ. ಮಾತ್ರವಲ್ಲ ಮಾದಕವಸ್ತುಗಳ ದಾಸರಾಗುತ್ತಿದ್ದಾರೆ ಎಂದು ತಿಳಿಸಿತ್ತು.

ಈ ಸಂದರ್ಭದಲ್ಲಿ ಡಿಎಂ ಮನರಂಜನೆ ಅಧಿಕಾರಿಗಳನ್ನು ಕರೆಸಿ ಸ್ಕೂಲ್ ಡ್ರೆಸ್ ಧರಿಸಿದವರಿಗೆ ಸಿನೆಮಾ ಟಿಕೆಟ್ ನೀಡಬಾರದು ಎಂದು ಆದೇಶ ಹೊರಡಿಸಲು ತಿಳಿಸಿದ್ದಾರೆ. ಡಿಎಮ್ ಮಾದಕ ವಸ್ತು ಚಟವನ್ನು ಬಿಡಿಸಲಿಕ್ಕಾಗಿ ಒಂದು ಉಚಿತ ಹೆಲ್ಫ್‌ಲೈನ್‌ನನ್ನು ಕೂಡ ಜಾರಿಗೊಳಿಸಲು ಆದೇಶಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News